
Amit Shah: ಬಿಜೆಪಿ ನಾಯಕರಿಗೆ ಟೆನ್ಷನ್ ಹೆಚ್ಚಿಸಿತಾ 4 ಕ್ಷೇತ್ರ ? ಆಯಾ ಕ್ಷೇತ್ರದ ನಾಯಕರಿಗೆ ಗೆಲುವಿನ ಗುರಿ ಕೊಟ್ಟ ಅಮಿತ್ ಶಾ!
ಹೈರಿಸ್ಕ್ ನಾಲ್ಕು ಕ್ಷೇತ್ರಗಳನ್ನು ಕಡ್ಡಾಯವಾಗಿ ಗೆಲ್ಲಿಸಲೇಬೇಕು
ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಅಭ್ಯರ್ಥಿ ಗೆಲ್ಲಲೇಬೇಕು
ಸುಖಾ ಸುಮ್ಮನೆ ಸಣ್ಣ ವಿಚಾರವನ್ನೂ ದೊಡ್ಡದು ಮಾಡಬೇಡಿ
ಬಿಜೆಪಿ ರೆಬೆಲ್ ನಾಯಕರಿಗೆ ವಾರ್ನ್ ಮಾಡಿದ ಅಮಿತ್ ಶಾ
ಹೈರಿಸ್ಕ್ ಕ್ಷೇತ್ರಗಳ ನಾಯಕರ ಜೊತೆ ಅಮಿತ್ ಶಾ(Amit Shah) ಸಭೆ ನಡೆಸಿದ್ದು, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ನಾಯಕರು ಸಭೆಯಲ್ಲಿ ಭಾಗಿಯಾಗಿದ್ರು. ಈ 4 ಕ್ಷೇತ್ರಗಳಲ್ಲಿ ಆಂತರಿಕ ಬಂಡಾಯವನ್ನು ಬಿಜೆಪಿ(BJP) ಎದುರಿಸುತ್ತಿದೆ. ಬಂಡಾಯ ಶಮನದ ಜೊತೆಗೆ ಅಭ್ಯರ್ಥಿ ಗೆಲ್ಲಿಸಲು ರಣತಂತ್ರ ರೂಪಿಸಲಾಗಿದೆ. ಈ ಸಭೆಯಲ್ಲಿ ವಿಜಯೇಂದ್ರ, ಬಿಎಸ್‌ವೈ, ಅಶೋಕ್ ಸೇರಿ ಹಲವರು ಭಾಗಿಯಾಗಿದ್ದರು. ನಾಯಕರಿಗೆ ಸಂಘಟನಾ ಪಾಠವನ್ನು ಅಮಿತ್ ಶಾ ಮಾಡಿದರು. ಜೆಡಿಎಸ್(JDS), ಬಿಜೆಪಿ ಒಟ್ಟಾಗಿ ಕೆಲಸ ಮಾಡುವಂತೆ ನೀತಿ ಪಾಠ ಮಾಡಿದ್ದಾರೆ. ಬಂಡಾಯ ಇರುವ ಎಲ್ಲ 4 ಕ್ಷೇತ್ರದಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕು. ಮಧ್ಯಾಹ್ನ 1 ಗಂಟೆಯೊಳಗೆ ಬಹುತೇಕ ಮತದಾನ ಮುಗಿಯಬೇಕು. ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಅಭ್ಯರ್ಥಿ ಗೆಲ್ಲಲೇಬೇಕು ಎಂದು ಅಮಿತ್ ಶಾ ಸೂಚಿಸಿದ್ದಾರಂತೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: Amit Shah Campaign: ಚನ್ನಪಟ್ಟಣದಲ್ಲಿ ರೋಡ್ ಶೋ..ಬಿಜೆಪಿ ತಂತ್ರವೇನು? ದೋಸ್ತಿ ನಾಯಕರ ಶಕ್ತಿ ಪ್ರದರ್ಶನ ವರ್ಕೌಟ್ ಆಯ್ತಾ?