Amit Shah Campaign: ಚನ್ನಪಟ್ಟಣದಲ್ಲಿ ರೋಡ್ ಶೋ..ಬಿಜೆಪಿ ತಂತ್ರವೇನು? ದೋಸ್ತಿ ನಾಯಕರ ಶಕ್ತಿ ಪ್ರದರ್ಶನ ವರ್ಕೌಟ್ ಆಯ್ತಾ?

ಡಿಕೆ ಬ್ರದರ್ಸ್ ಕೋಟೆಯಿಂದಲೇ ಅಮಿತ್ ಶಾ ರಣಕಹಳೆ 
ರೋಡ್ ಶೋ ಮೂಲಕ ಅಲೆ ಎಬ್ಬಿಸಿದ ಅಮಿತ್ ಶಾ
ಡಿಕೆಶಿ ಸೋದರರಿಗೆ ನಡುಕ ಹುಟ್ಟಿಸಿತಾ ರೋಡ್ ಶೋ?

Share this Video
  • FB
  • Linkdin
  • Whatsapp

ಲೋಕಸಭೆ ಎಲೆಕ್ಷನ್‌ನಲ್ಲಿ ಬಿಜೆಪಿ ಗೆಲುವಿಗೆ ಅಮಿತ್ ಶಾ(Amit Shah) ರಣತಂತ್ರ ಹೆಣೆದಿದ್ದಾರೆ. ರಾಜ್ಯಕ್ಕೆ ಭೇಟಿ ನೀಡಿದ ಬಿಜೆಪಿ(BJP) ಚಾಣಕ್ಯ ಬಂಡಾಯ ಶಮನ ಜೊತೆಗೆ ನಾಯಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ನೀತಿ ಪಾಠ ಮಾಡಿದ ಶಾ, ಯಾರು ಅಸಮಾಧಾನಿತ ನಾಯಕರು ಇದ್ದಾರೆ ಅವರಿಗೆ ಗೆಲ್ಲಿಸುವ ಟಾಸ್ಕ್ ಕೊಟ್ಟಿದ್ದಾರೆ. ಇನ್ನು ಡಿ.ಕೆ ಬ್ರದರ್ಸ್ ಅಡ್ಡಾದಲ್ಲಿ ರಣಕಹಳೆ ಮೊಳಗಿಸಿದ ಶಾ 5 ಲಕ್ಷ ಅಂತರದಲ್ಲಿ ಡಾಕ್ಟರ್ ಸಿ.ಎನ್ ಮಂಜುನಾಥ್( Dr. C.N.Manjunath) ಗೆಲ್ತಾರೆ ಅಂತಾ ಭವಿಷ್ಯ ನುಡಿದಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್‌ರನ್ನ(DK Shivakumar) ಕ್ಷೇತ್ರದಲ್ಲೇ ಕಟ್ಟಿ ಹಾಕೋದು ಬಿಜೆಪಿಯ ಪ್ಲ್ಯಾನ್‌ ಆಗಿದೆ. ರಾಜ್ಯಾದ್ಯಂತ ಡಿಕೆಶಿ ಹೆಚ್ಚು ಓಡಾಡದಂತೆ ತಡೆಯುವ ಉದ್ದೇಶ ಇದರ ಹಿಂದಿದೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಹಣಕಾಸಿನ ತೊಡಕಿದ್ದು, ವೃತ್ತಿಯಲ್ಲಿ ಅನುಕೂಲ ಇದೆ..

Related Video