Today Horoscope: ಧನಸ್ಸುವಿನಿಂದ ಮಕರ ರಾಶಿಗೆ ಕುಜನ ಪರಿವರ್ತನೆಯಾಗಲಿದ್ದು, ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

Share this Video
  • FB
  • Linkdin
  • Whatsapp

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಸೋಮವಾರ, ದಶಮಿ ತಿಥಿ, ಜ್ಯೇಷ್ಠ ನಕ್ಷತ್ರ.

ಈ ದಿನ ಶುಭ ಸೂಚಕವಾಗಿದೆ. ಇಂದು ಧನಸ್ಸು ರಾಶಿಯಿಂದ ಕುಜ ಮಕರ ರಾಶಿಗೆ ತನ್ನ ಪರಿವರ್ತನೆ ಮಾಡಲಿದ್ದಾನೆ. ಗ್ರಹ ಉಚ್ಚ ಸ್ಥಾನದಲ್ಲಿ ಇದ್ದಾಗ, ಎಲ್ಲಾ ಸಂಪತ್ತನ್ನು ತಂದು ಕೊಡುತ್ತಾನೆ. ವೃಷಭ ರಾಶಿಯ ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಸಣ್ಣಪುಟ್ಟ ಕಿರಿಕಿರಿ ಇರಲಿವೆ. ದಾಂಪತ್ಯದಲ್ಲಿ ಮನಸ್ತಾಪ. ವಿದ್ಯಾರ್ಥಿಗಳಿಗೆ ತೊಡಕು. ವೃತ್ತಿಯಲ್ಲಿ ಅನುಕೂಲ. ಸುಬ್ರಹ್ಮಣ್ಯ ಸನ್ನಿಧಾನಕ್ಕೆ ತೊಗರಿ-ಬೆಲ್ಲ ಸಮರ್ಪಣೆ ಮಾಡಿ.

ಇದನ್ನೂ ವೀಕ್ಷಿಸಿ: Weekly-Horoscope: 12 ರಾಶಿಗಳ ವಾರದ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

Related Video