ಮಲಗಿದ್ದವರ ಮೇಲೆ ಬಿದ್ದ ಸೀಲಿಂಗ್‌ ಫ್ಯಾನ್‌... ಆಮೇಲೇನಾಯ್ತು ನೋಡಿ

ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ ಕೆಲ ವಿಡಿಯೋಗಳು ಇಲ್ಲಿವೆ. 

Share this Video
  • FB
  • Linkdin
  • Whatsapp

ಮಲಗಿದ್ದವರ ಮೇಲೆ ಸೀಲಿಂಗ್‌ ಫ್ಯಾನ್‌ ಬಿದ್ದಂತಹ ಘಟನೆ ನಡೆದಿದೆ. ಇವರ ಅದೃಷ್ಟ ಚೆನ್ನಾಗಿದ್ದ ಕಾರಣ ಬದುಕುಳಿದಿದ್ದಾರೆ. ಒಂದು ಬೆಡ್‌ ಮೇಲೆ ಇಬ್ಬರು ಕಾಲು ನೀಡಿ ಮಲಗಿಕೊಂಡು ಮತ್ತೊಬ್ಬ ಪಕ್ಕದಲ್ಲೇ ಕುಳಿತುಕೊಂಡು ಮಾತನಾಡುತ್ತಿದ್ದರು. ಈ ವೇಳೆ ಫ್ಯಾನ್‌ ಧೊಪ್ಪೆಂದು ಕೆಳಗೆ ಬಿದ್ದಿದೆ. ಪುಣ್ಯಕ್ಕೆ ಮಧ್ಯದಲ್ಲಿ ಫ್ಯಾನ್‌ ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂತಹ ಘಟನೆ ಈ ಹಿಂದೆಯೂ ನಡೆದಿತ್ತು. ಕುಟುಂಬವೊಂದು ಹಾಲ್‌ನ ಮಧ್ಯಭಾಗದಲ್ಲಿ ನೆಲದಲ್ಲಿ ಕುಳಿತು ಊಟ ಮಾಡುತ್ತಿದ್ದಾಗ ಫ್ಯಾನ್‌ ಒಂದು ಬಿದ್ದಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಲ್ಲೊಂದು ಕಡೆ ಕಾಡು ಕೋಣ ಹಾಗೂ ಸಿಂಹದ ಮಧ್ಯೆ ಭಯಂಕರ ಫೈಟ್ ನಡೆದಿದ್ದು ಕಾಡು ಕೋಣ ಸಿಂಹವನ್ನು ಮೇಲಕ್ಕೆತ್ತಿ ಬಿಸಾಕಿದ ಘಟನೆ ನಡೆದಿದ್ದು, ಇದರ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಿಟ್ಟಿಗೆದ್ದ ಆನೆಯೊಂದು ನಾಲ್ವರಿದ್ದ ಕಾರನ್ನು ಬಾಲ್‌ ಉರುಳಿಸಿದಂತೆ ಉರುಳಿಸಿ ರಸ್ತೆಯಿಂದ ಪಕ್ಕಕ್ಕೆ ಹಾಕಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. 

ಇನ್ನು ವ್ಯಕ್ತಿಯೊಬ್ಬ ವಿಶ್ವದ ಅತೀದೊಡ್ಡ ಸೈಕಲೊಂದನ್ನು ನಿರ್ಮಿಸಿ ಅದನ್ನು ಸವಾರಿ ಮಾಡಿದ್ದು, ಅದೀಗ ಗಿನ್ನಿಸ್‌ ಬುಕ್‌ ಆಪ್‌ ರೆಕಾರ್ಡ್‌ಗೆ ಸೇರಿಸಲ್ಪಟ್ಟಿದೆ. ಇನ್ನು ಮಹಿಳೆಯೊಬ್ಬರು ಪ್ಯಾರಾ ಗ್ಲೈಂಡಿಂಗ್‌ ಮಾಡಲು ಹೋಗಿ ಭಯದಿಂದ ಕಿರುಚಿದ ವಿಡಿಯೋ ವೈರಲ್‌ ಆಗಿದ್ದು, ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. 

Related Video