Asianet Suvarna News Asianet Suvarna News

ವ್ಹೀಲಿಂಗ್ ಪುಂಡರ ಹಾವಳಿಗೆ ಬ್ರೇಕ್ ಯಾವಾಗ?: ಜೀವ ಕೈಯಲ್ಲಿ ಹಿಡಿದು ಇತರ ವಾಹನ ಸವಾರರ ಪ್ರಯಾಣ

ನೆಲಮಂಗಲದ ರಸ್ತೆಯಲ್ಲಿ ಕೆಲ ಪುಂಡರು ಡೇಂಜರಸ್ ವ್ಹೀಲಿಂಗ್ ಮಾಡಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 

ನೆಲಮಂಗಲ: ವೀಕೆಂಡ್‌ನಲ್ಲಿ ಪುಂಡರು ವ್ಹೀಲಿಂಗ್ ಮಾಡುವುದರಿಂದ ವಾಹನ ಸವಾರರು ಕಂಗಾಲಾಗಿದ್ದಾರೆ. ಗೊರಗುಂಟೆ ಪಾಳ್ಯ ನೆಲಮಂಗಲ ರಸ್ತೆಯಲ್ಲಿ ಡೇಂಜರಸ್ ವ್ಹೀಲಿಂಗ್ ಮಾಡಲಾಗುತ್ತಿದೆ. ವೀಕೆಂಡ್‌ ಟ್ರಾಫಿಕ್‌ನಲ್ಲೂ ಡೇಂಜರಸ್ ವ್ಹೀಲಿಂಗ್ ನಡೆಯುತ್ತಿದೆ. ಒಬ್ಬ ವ್ಹೀಲಿಂಗ್ ಮಾಡಿದ್ರೆ ಮತ್ತೊಬ್ಬರಿಂದ ವಿಡಿಯೋ ಕವರೇಜ್ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪುಂಡರು ಹರಿಬಿಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಫಾಲೋವರ್ಸ್‌ಗಾಗಿ ಈ ರೀತಿ ಹುಚ್ಚಾಟವನ್ನು ಮಾಡಲಾಗುತ್ತಿದೆ. ಇವರ ಹುಚ್ಚಾಟಕ್ಕೆ ಇತರೆ ಬೈಕ್, ವಾಹನ ಸವಾರರು ಹೈರಾಣಾಗಿದ್ದಾರೆ. ಅಲ್ಲದೇ ಜೀವ ಕೈಯಲ್ಲಿ ಹಿಡಿದು ಇತರ ವಾಹನ ಸವಾರರು ಸಂಚರಿಸಬೇಕಾಗಿದೆ. 

ಇದನ್ನೂ ವೀಕ್ಷಿಸಿ: ಅಸ್ತಿತ್ವಕ್ಕೆ ಬಂತು ಸಿದ್ದು-ಡಿಕೆಶಿ ಸರ್ಕಾರ: ಲೋಕಸಭೆ ಮೇಲೆ ಏನು ಪರಿಣಾಮ ಬೀರಲಿದೆ ಈ ಫಲಿತಾಂಶ?

Video Top Stories