Asianet Suvarna News Asianet Suvarna News

ಮಾತಿಲ್ಲ..ಕಥೆಯಿಲ್ಲ..ಓನ್ಲಿ ಫೈಟಿಂಗ್: ಒಂದೊಂದು ಬಡಿದಾಟಗಳೂ ಏಕಾಏಕಿ ವೈರಲ್ ..!

ನಡುರಸ್ತೆಯಲ್ಲಿ ಶುರುವಾಯ್ತು ಜಡೆಜಗಳ
ಬಾಯ್ ಫ್ರೆಂಡ್ ವಿಚಾರಕ್ಕೆ ಘನಘೋರ ಕದನ
ಪೊಲೀಸ್ ಮೇಲೆಯೇ ಎಗರಿ ಹೋದವ ಏನಾದ..?

ಫೈಟಿಂಗ್ ಅನ್ನೋದು ತೀರಾ ಕಾಮನ್. ಮನುಷ್ಯನ ತಾಳ್ಮೆ ಮೀರಿದಾಗ ಒಂದೋ ಬಾಯಿಗೆ ಕೆಲಸ ಕೊಡ್ತಾನೆ ಅಥವಾ ಕೈಯನ್ನ ಮುಂದು ಮಾಡ್ತಾನೆ. ವಿಚಾರ ಚಿಕ್ಕದೋ ಅಥವಾ ದೊಡ್ಡದೋ ಲೆಕ್ಕವೇ ಇಲ್ಲ.ಕೋಪಕ್ಕೆ ಕೈ ಮಾಡೋದು ಸಾಮಾನ್ಯವಾಗಿ ಬಿಟ್ಟಿದೆ. ಇಲ್ಲಿ ಒಂದಿಷ್ಟು ಸಹನೆ ಮೀರಿರೋ ಜನರಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಫೈಟಿಂಗ್(Fighting) ಮೂಲಕ ವೈರಲ್ ಆಗಿದ್ದಾರೆ. ಉತ್ತರ ಪ್ರದೇಶದ ಗೋರಖ್‌ ಪುರದಲ್ಲಿ ಕಾಲೇಜು ವಿದ್ಯಾರ್ಥಿಗಳ(Students) ಫೈಟಿಂಗ್ ಸೀನ್ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಕಾಲೇಜು ಒಂದರಲ್ಲಿ ಗಲಾಟೆ ಆಗಿರುತ್ತೆ. ಹೀಗಾಗಿ ಅಲ್ಲಿ ಪೊಲೀಸರು ಎಂಟ್ರಿ ಕೊಟ್ಟಿದ್ದರು. ಆ ವೇಳೆ ಎಬಿವಿಪಿ ವಿದ್ಯಾರ್ಥಿಗಳು ಎನ್ನಲಾದ ಗುಂಪು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಆಮೇಲೆ ಶುರುವಾಗಿದೆ ನೋಡಿ ಮೆಗಾ ಫೈಟಿಂಗ್‌.

ಇದನ್ನೂ ವೀಕ್ಷಿಸಿ:  ನಿಮಗೆ ಪ್ರತಿದಿನ ಕೆಟ್ಟ ಆಲೋಚನೆಗಳು ಬರುತ್ತಿವೆಯಾ..?: ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಹೀಗೆ ಮಾಡಿ..

Video Top Stories