ಎಲೆಕ್ಷನ್ ಮುಗಿಯುತ್ತಿದ್ದಂತೆ ತಾಂಡಾಗಳೇ ಖಾಲಿ.. ಖಾಲಿ: ಮಕ್ಕಳು, ವೃದ್ಧರನ್ನ ಬಿಟ್ಟರೇ ಜನರೆ ಇಲ್ಲ, ಆವರಿಸಿದ ಸ್ಮಶಾನ ಮೌನ !

ವಿಜಯಪುರ ಜಿಲ್ಲೆಯ ಮಧಬಾವಿ ಎಲ್.ಟಿ, ಬರಟಗಿ ಎಲ್.ಟಿ, ಮಹಲ್ ಎಲ್.ಟಿ, ಕೆಸರಾಳ ಎಲ್.ಟಿ‌‌ ಸೇರಿದಂತೆ ಬಹುತೇಕ ತಾಂಡಾಗಳು ಖಾಲಿಯಾಗಿದ್ದು, ಕೆಲಸಕ್ಕಾಗಿ ಪಕ್ಕದ ರಾಜ್ಯಗಳಿಗೆ ಜನ ಗುಳೆ ಹೋಗುತ್ತಿದ್ದಾರೆ.

Share this Video
  • FB
  • Linkdin
  • Whatsapp

ವಿಜಯಪುರ: ಜಿಲ್ಲೆಯ ಬಹುತೇಕ ತಾಂಡಾಗಳು ಖಾಲಿ ಖಾಲಿಯಾಗಿವೆ. ಅಲ್ಲದೇ ಲಂಬಾಣಿ ತಾಂಡಾಗಳು ಬಿಕೋ ಎನ್ನುತ್ತಿವೆ. ಮನೆಗೆ ಮುಳ್ಳು ಕಂಟಿ ಹಾಕಿ, ಬೀಗ ಜಡಿದು ಜನ ಗುಳೆ ಹೋಗುತ್ತಿದ್ದಾರೆ. ಮತದಾನ ಬಳಿಕ ಮತ್ತೆ ತಾಂಡಾ ನಿವಾಸಿಗಳು ಗುಳೆ ಹೋಗಿದ್ದಾರೆ. ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಜನ ಗುಳೆ ಹೋಗುತ್ತಿದ್ದು, ತಾಂಡಾಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಮಧಬಾವಿ ತಾಂಡಾದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದೆ. ಮಕ್ಕಳು, ವೃದ್ಧರನ್ನ ಬಿಟ್ಟರೇ ತಾಂಡಾಗಳಲ್ಲಿ ಯಾವುದೇ ಜನರು ಇಲ್ಲ. ಹೀಗಾಗಿ ಎಲ್ಲಿ ನೋಡಿದರೂ ಬೀಗ ಹಾಕಿದ ಮನೆಗಳು ಕಂಡುಬರುತ್ತವೆ. ಮನೆ ಕಟ್ಟಲು ಸಾಲ, ಸಾಲ ತೀರಿಸಲು ಉದ್ಯೋಗ ಸಿಗದೆ ನೆರೆ ರಾಜ್ಯಗಳಿಗೆ ಜನ ಗುಳೆ ಹೋಗುತ್ತಿದ್ದಾರೆ.

ಇದನ್ನೂ ವೀಕ್ಷಿಸಿ: ಒಂಟಿ ಮಹಿಳೆ ಕೊಂದು ಮನೆ ದೋಚಿದ್ರು ಹಂತಕರು: ಬೆಟ್ಟಿಂಗ್‌ನಲ್ಲಿ ಸೋತ ಹಣವನ್ನ ಕೊಡಲು ಮರ್ಡರ್ ..!

Related Video