Asianet Suvarna News Asianet Suvarna News

ಒಂಟಿ ಮಹಿಳೆ ಕೊಂದು ಮನೆ ದೋಚಿದ್ರು ಹಂತಕರು: ಬೆಟ್ಟಿಂಗ್‌ನಲ್ಲಿ ಸೋತ ಹಣವನ್ನ ಕೊಡಲು ಮರ್ಡರ್ ..!

ಪೊಲೀಸರಿಗೆ ಹಂತಕರ ಸುಳಿವು ಕೊಟ್ಟಿದ್ದು ಭಗವಾನ್ ಶ್ರೀರಾಮ
4 ತಿಂಗಳಿನಿಂದ ಒಂಟಿ ಮಹಿಳೆಯನ್ನ ವಾಚ್ ಮಾಡಿದ್ದ ಆರೋಪಿಗಳು
ಬೆಟ್ಟಿಂಗ್‌ನಲ್ಲಿ ಸೋತ ಹಣವನ್ನ ಕೊಡಲು ಮರ್ಡರ್ ಮಾಡಿಬಿಟ್ರು..!

ಆಕೆ 82 ವರ್ಷದ ವೃದ್ಧೆ, ಮನೆಯಲ್ಲಿ ಒಂಟಿಯಾಗಿ ಜೀವನ ಮಾಡ್ತಿದ್ಲು. ಸದಾ ರಾಮನ ಜಪ ಮಾಡಿಕೊಂಡು ಕೊನೆದಿನಗಳನ್ನ ಏಣಿಸುತ್ತಿದ್ದರು. ಆದ್ರೆ  ಅವತ್ತು ಆ ಒಂಟಿ ವೃದ್ಧೆ ತನ್ನದೇ ಮನೆಯಲ್ಲಿ ಹೆಣವಾಗಿ ಸಿಕ್ಕಿದ್ಲು. ಯಾರೋ ಆಕೆ ಏಕಾಂಗಿಯಾಗಿರೋದನ್ನೇ ಗಮನಿಸಿ ಈ ಕೃತ್ಯವೆಸಗಿರೋದು ಕನ್ಫರ್ಮ್ ಆಗಿತ್ತು. ಆದ್ರೆ ಆಕೆಯ ಕಥೆಯನ್ನ ಮುಗಿಸಿದ್ಯಾರು..? ಈ ಪ್ರಶ್ನೆ ಪೊಲೀಸರನ್ನ ಇನ್ನಿಲ್ಲದಂತೆ ಕಾಡಿಬಿಟ್ಟಿತ್ತು. ತನಿಖೆಗಿಳಿದ ಪೊಲೀಸರಿಗೆ ಒಂದೇ ಒಂದು ಕ್ಲೂ ಸಹ ಸಿಕ್ಕಿರಲಿಲ್ಲ. ಆದ್ರೆ ಕೊನೆಗೆ ಆ ವೃದ್ಧೆ ಪೂಜಿಸುತ್ತಿದ್ದ ಆ ಶ್ರೀ ರಾಮನೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ. ಕಮಲಮ್ಮ ಮನೆಯ ಬದಿ ಇದ್ದ ಸಿಸಿಟಿವಿಯನ್ನ ಪರಿಶೀಲಿಸಿದ ಪೊಲೀಸರಿಗೆ ಅಲ್ಲಿ ಶ್ರೀರಾಮನ ದರ್ಶನವಾಗಿತ್ತು. ಒಬ್ಬ ಪ್ಲಂಬರ್ ಮತ್ತೊಬ್ಬ ಕಂಟ್ರಾಕ್ಟರ್ ಇನ್ನೊಬ್ಬ ಆಟೋ ಡ್ರೈವರ್. ಈ ಮೂವರನ್ನ ಎತ್ತಾಕೊಂಡು ಬಂದ ಪೊಲೀಸರು ವರ್ಕ್ ಮಾಡಿದ ಮೇಲೆ ಈ ಕಿರಾತಕರು ಒಂದೊಂದೇ ಸತ್ಯವನ್ನ ಬಾಯಿಬಿಡೋದಕ್ಕೆ ಶುರು ಮಾಡಿದ್ರು. 

ಇದನ್ನೂ ವೀಕ್ಷಿಸಿ: ಗ್ಯಾರಂಟಿ ಭಾಗ್ಯಕ್ಕೆ ಸಿದ್ದು ಸರ್ಕಾರ ಅಸ್ತು: ಈಗಿಂದ ಹೇಗೆ ಬದಲಾಗಲಿದೆ ರಾಜ್ಯದ ಭವಿಷ್ಯ ?

Video Top Stories