Asianet Suvarna News Asianet Suvarna News

ಸಿದ್ದಗಂಗಾ ಮಠದಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಶುರು: ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಪೋಷಕರು!

ಸಿದ್ದಗಂಗಾ ಶಾಲೆಯಲ್ಲಿ ಜೋರಾಗಿ ಸಾಗಿದೆ ಮಕ್ಕಳ ಸೇರ್ಪಡೆ 
ಮಠದಲ್ಲಿ ಓದುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಪೂರ್ಣ ಉಚಿತ
ಪ್ರತಿ ವರ್ಷ 10 ಸಾವಿರ ಮಕ್ಕಳು ಮಠದ ಶಾಲೆಗೆ ದಾಖಲು
 

ತ್ರಿವಿಧ ದಾಸೋಹ ಖ್ಯಾತಿಯ ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ರಾಜ್ಯದ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳ ಪ್ರವೇಶ ಬಯಸಿ ಸಿದ್ದಗಂಗಾ ಮಠದತ್ತ ಮುಖ ಮಾಡಿದ್ದಾರೆ. ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯದ ಪ್ರವೇಶ ಪತ್ರಗಳನ್ನು ಒಂದು ತಿಂಗಳ ಹಿಂದೆ ನೀಡಲಾಗಿದ್ದು,  ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯಕ್ಕೆ ಹೊಸದಾಗಿ 3 ರಿಂದ 9ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಬಯಸುವ ಗ್ರಾಮೀಣ ಬಡ ಕುಟುಂಬದ ವಿದ್ಯಾರ್ಥಿಗಳು ಖುದ್ದಾಗಿ ಬಂದು ಶ್ರೀ ಮಠದ ಲೆಕ್ಕಪತ್ರ ವಿಭಾಗದಲ್ಲಿ ಪ್ರವೇಶ ಪತ್ರವನ್ನು ಪಡೆಯಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೂ ಆದ್ಯತೆ ನೀಡಲಾಗಿದೆ. ಈ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಪೋಷಕರು ಸಹ ಮಠಕ್ಕೆ ಭೇಟಿ ನೀಡಿ ಮಠದ ಶಾಲೆಗೆ ದಾಖಲಾಗುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ: ಸೋಲಿನ ಹತಾಶೆಯಿಂದ ಕಿರುಕುಳ ಕೊಟ್ಟಲ್ಲಿ ಸಹಿಸಲಾಗುವುದಿಲ್ಲ: ಶಾಸಕ ತಮ್ಮಯ್ಯ