Asianet Suvarna News Asianet Suvarna News

ಸೋಲಿನ ಹತಾಶೆಯಿಂದ ಕಿರುಕುಳ ಕೊಟ್ಟಲ್ಲಿ ಸಹಿಸಲಾಗುವುದಿಲ್ಲ: ಶಾಸಕ ತಮ್ಮಯ್ಯ

ಸೋಲಿನ ಹತಾಶೆಯಿಂದ ಕಿರುಕುಳ ಕೊಟ್ಟಲ್ಲಿ ಸಹಿಸಲಾಗದು ಎಂದು ಹೇಳುವ ಮೂಲಕ ಮಾಜಿ ಶಾಸಕ  ಸಿ..ಟಿ ರವಿ ವಿರುದ್ದ ಹಾಲಿ ಶಾಸಕ ತಮ್ಮಯ್ಯ ಪರೋಕ್ಷವಾಗಿ ಕಿಡಿಕಾರಿದ್ದಾರೆ.
 

ಚಿಕ್ಕಮಗಳೂರು: ಮಾಜಿ ಶಾಸಕ ಸಿ.ಟಿ ರವಿ ವಿರುದ್ದ ಹಾಲಿ ಶಾಸಕ ತಮ್ಮಯ್ಯ ಪರೋಕ್ಷವಾಗಿ ಗುಡುಗಿದ್ದಾರೆ. ಸೋಲಿನ ಹತಾಶೆಯಿಂದ ಕಿರುಕುಳ ಕೊಟ್ಟಲ್ಲಿ ಸಹಿಸಲಾಗದು. ಒಂದು ವೇಳೆ ಕಿರುಕುಳ ಕೊಟ್ಟರೇ, ಸಂವಿಧಾನಾತ್ಮಕ ಅಧಿಕಾರ ಚಲಾಯಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಯಾರ ವಿರುದ್ದವೂ ಸೇಡು ಸಾಧಿಸಲು ಹೋಗುವುದಿಲ್ಲ.ಪ್ರತಿಯೊಬ್ಬರನ್ನು ಪ್ರೀತಿ ವಿಶ್ವಾಸ ಗೌರವದಿಂದ ಕಾಣುತ್ತೇನೆ. ಜನಸ್ನೇಹಿ ಕೆಲಸ ಮಾಡುವ  ಭರವಸೆ, ಶಾಸಕ ಸ್ಥಾನ ಯಾರಿಗೂ ಶಾಶ್ವತವಲ್ಲ. ವಾರದ ಮೂರು ದಿನ ಶಾಸಕರ ಕಚೇರಿಯಲ್ಲಿ, ಬುಧವಾರ ಪಕ್ಷದ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡುತ್ತೇನೆ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್. ಡಿ. ತಮ್ಮಯ್ಯ ಹೇಳಿಕೆ ನೀಡಿದ್ದಾರೆ. 

ಇದನ್ನೂ ವೀಕ್ಷಿಸಿ: ಶಾರ್ಟ್ ಸರ್ಕ್ಯೂಟ್‌ನಿಂದ ಮಂಗ ಸಾವು: ಟೋಪಿ, ಟವೆಲ್, ಶರ್ಟ್ ಪ್ಯಾಂಟ್ ತೊಡಿಸಿ ಪೂಜೆ ಮಾಡಿದ ಗ್ರಾಮಸ್ಥರು !

Video Top Stories