ರಾಮಯಣ ಒಂದು ಪಾತ್ರದ ಕಥೆಯಲ್ಲ, ಹಲವು ಪಾತ್ರಗಳನ್ನು ಇದು ಒಳಗೊಂಡಿದೆ: ಗಜಾನನ ಶರ್ಮಾ
ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಗಜಾನನ ಶರ್ಮಾ ಅವರ ತಂಡದ ನೇತೃತ್ವದಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಸುಮಧುರ ಗೀತೆಗಳನ್ನು ಕೇಳಿ..
ಒಬ್ಬ ಆದರ್ಶ ವ್ಯಕ್ತಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡುತ್ತಾನೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಪಾತ್ರವಿದೆ. ರಾಮಯಣ ಒಂದು ಪಾತ್ರದ ಕಥೆಯಲ್ಲ. ರಾಮ ಭಾರತೀಯರಿಗೆ ಕೇವಲ ದೇವರು ಮಾತ್ರವಲ್ಲ, ಆತ ಆದರ್ಶದ ಪ್ರತೀಕವಾಗಿದ್ದಾನೆ. ಆತನಿಗೆ ಒಂದು ಅದ್ಭುತವಾಗ ದೇಗುಲವನ್ನು ನಿರ್ಮಿಸಲಾಗಿದೆ ಎಂದು ಗಜಾನನ ಶರ್ಮಾ ಹೇಳುತ್ತಾರೆ. ಈ ಮೂಲಕ ನಾವೆಲ್ಲರೂ ರಾಮನನ್ನು ಮತ್ತೆ ಮತ್ತೆ ಸ್ಮರಿಸುವಂತೆ ಆಗಿದೆ. 500 ವರ್ಷಗಳ ಹೋರಾಟದ ಫಲವಾಗಿ ಇಂದು ರಾಮ ಮಂದಿರ ಉದ್ಘಾಟನೆಯಾಗಿದೆ. ವ್ಯಕ್ತಿತ್ವ ವಿಕಸನ ಅದು ರಾಮಯಣದ ಮೂಲಕ ಸಾಧ್ಯ. ಪ್ರೀತಿ, ಸಹನೆ ಸೇರಿದಂತೆ ಹಲವು ವ್ಯಕ್ತಿತ್ವಗಳು ರೂಪುಗೊಂಡಿರುವ ವ್ಯಕ್ತಿ ಎಂದರೇ ಅದು ರಾಮ. ರಾಮ ಈಗ ಪ್ರತಿಯೊಬ್ಬರ ಹೃದಯದಲ್ಲಿ ಇದ್ದಾನೆ ಎಂದು ಗಜಾನನ ಶರ್ಮಾ ಹೇಳುತ್ತಾರೆ.
ಇದನ್ನೂ ವೀಕ್ಷಿಸಿ: ಎಲ್ಲಾರನ್ನೂ ಒಳಗೊಂಡು ಬದುಕುವಂತಹ ವ್ಯಕ್ತಿತ್ವ ಬೆಳಸಿಕೊಂಡಿರುವ ವ್ಯಕ್ತಿ ರಾಮ: ಗಜಾನನ ಶರ್ಮಾ