Rain in Bengaluru: ರಾಜ್ಯದ ಹಲವೆಡೆ ಮಳೆರಾಯನ ದರ್ಶನ: ಬಿಸಿಲಿನಿಂದ ‘ಬೆಂದ’ಕಾಳೂರಿಗೆ ಮಳೆ ಸಿಂಚನ!

ಕಳೆದ 6 ತಿಂಗಳಿನಿಂದ ಕರುನಾಡಿನ ಮೇಲೆ ಮುನಿಸಿಕೊಂಡಿದ್ದ ವರುಣಾ ಕೊನೆಗೂ ರಾಜ್ಯದ ಮೇಲೆ ಕರುಣೆ ತೋರಿದ್ದಾನೆ. ದಕ್ಷಿಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದೆ. ಆದ್ರೆ, ಒಮ್ಮೆಲೆ ಸುರಿದ ಮಳೆಯಿಂದಾಗಿ ಹಲವೆಡೆ ಸರಣಿ ಅವಾಂತರಗಳು ಸೃಷ್ಟಿಯಾಗಿವೆ.

First Published May 4, 2024, 11:46 AM IST | Last Updated May 4, 2024, 11:46 AM IST

ರಣ ಬಿಸಿಲಿನಿಂದ ಬೆಂದು ಬಸವಿಳಿದಿದ್ದ ಕರುನಾಡಿನ(Karnataka) ಮೇಲೆ ಕೊನೆಗೂ ಮಳೆರಾಯ ಕೃಪೆ ತೋರಿದ್ದಾನೆ. ರಾಜ್ಯದ ಹಲವೆಡೆ ಮೇಘರಾಜ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ವರುಣದೇವನ ಎಂಟ್ರಿಯಿಂದ ಸೆಕೆಯಿಂದ ಹಿಂಡು ಹಿಪ್ಪೆಯಾಗಿದ್ದ ಮಂದಿ ಖುಷ್ ಆಗಿದ್ರೆ, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಮಳೆರಾಯ(Rain) ಅಬ್ಬರಿಸಿ ಬೊಬ್ಬರಿದಿದ್ದಾನೆ. ಬೆಂಗಳೂರಿನ(Bengaluru) ಗಲ್ಲಿಗಲ್ಲಿಯಲ್ಲೂ ಗಂಗೆ ಝೇಂಕರಿಸಿದ್ದಾಳೆ. ದಿಢೀರ್ ಮಳೆಗೆ ಕೆಲವಡೆ ಟ್ರಾಫಿಕ್ ಜಾಂ ಉಂಟಾಗಿ ಸವಾರರು ಪರದಾಡಿದ್ರು. ಬೆಂಗಳೂರಿನಲ್ಲಿ ಮಳೆಗೆ ಮೊದಲ ಬಲಿಯಾಗಿದೆ. ಹೊಸಕೋಟೆಯ ಗಣಗಲು ಗ್ರಾಮದಲ್ಲಿ ಸಿಡಿಲಿಗೆ ಮರದಡಿ ನಿಂತಿದ್ದ ರತ್ನಮ್ಮ ಎಂಬ ಮಹಿಳೆ ಮೃತಪಟ್ಟಿದ್ದಾಳೆ. ನೆಲಮಂಗಲದಲ್ಲಿ ಬಿರುಗಾಳಿ ಸಹಿತ ಮಳೆಗೆ ಪೆಟ್ಟಿಗೆ ಅಂಗಡಿ ಮೇಲೆ ಮರವೊಂದು ಉರುಳಿಬಿದ್ದಿತ್ತು. ಅದೃಷ್ಟವಶಾತ್ ಅಂಗಡಿಯಲ್ಲಿ ಯಾರು ಇಲ್ಲದ ಕಾರಣ ಪ್ರಾಣಹಾನಿ ತಪ್ಪಿತು. ಅರಮನೆನಗರಿ ಮೈಸೂರಲ್ಲಿ(Mysore) ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ್ವು. ಕಾಳಿದಾಸ ರಸ್ತೆಯಲ್ಲಿ ಮರ ಬಿದ್ದು, ಹತ್ತಾರು ಕಾರುಗಳು ಜಖಂ ಆದ್ವು. ರಾಮನಗರದಲ್ಲಿ ಸಿಡಿಲು ಬಡಿತದಿಂದಾಗಿ ರಾಮನಗರದ ಪ್ರಸಿದ್ಧ ಜಾನಪದ ಲೋಕದಲ್ಲಿ ನಿರ್ಮಿಸಿದ್ದ ಗಿರಿಜನ ಶೆಡ್ ಬೆಂಕಿಗಾಹುತಿಯಾಗಿದೆ. ಜಾನಪದ ಕಲೆಯ ಆಟಿಕೆಗಳು ಸರ್ವನಾಶವಾಗಿದೆ.

ಇದನ್ನೂ ವೀಕ್ಷಿಸಿ:  Ilayaraja: ರಜನಿಯ 'ಕೂಲಿ'ಗೆ ಇಳಯರಾಜ ಕೃತಿಚೌರ್ಯ ನೋಟಿಸ್ ಕಳುಹಿಸಿದ್ದೇಕೆ..?