Ilayaraja: ರಜನಿಯ 'ಕೂಲಿ'ಗೆ ಇಳಯರಾಜ ಕೃತಿಚೌರ್ಯ ನೋಟಿಸ್ ಕಳುಹಿಸಿದ್ದೇಕೆ..?

ಕಾಲಿವುಡ್‌ನಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದೆ. ಅದು ತಲೈವಾ ರಜನಿಕಾಂತ್ ಸಿನಿಮಾ ಹಾಗೂ ಸಂಗೀತ ನಿರ್ದೇಶಕ ಇಳಯರಾಜ ಮಧ್ಯೆ. ಸೂಪರ್ ಸ್ಟಾರ್ ರಜಿನಿಕಾಂತ್ ನಟನೆಯ ಕೂಲಿ ಸಿನಿಮಾಗೆ ಸಂಬಂಧಪಟ್ಟಂತೆ ಆಕ್ರೋಶಗೊಂಡಿರೋ ಸಂಗೀತ ನಿರ್ದೇಶಕ ಇಳಯರಾಜ ಲೀಗಲ್ ನೋಟಿಸ್ ಕಳಿಸಿದ್ದಾರೆ.

First Published May 4, 2024, 11:22 AM IST | Last Updated May 4, 2024, 11:22 AM IST

ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿರೋ ತಲೈವಾ ನಟಿಸುತ್ತಿರುವ ‘ಕೂಲಿ’ ಚಿತ್ರದ(Coolie Movie) ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಇತ್ತೀಚಿಗಷ್ಟೇ ಟೀಸರ್ ಮೂಲಕ ಚಿತ್ರದ ಟೈಟಲ್‌ನ್ನ ಚಿತ್ರತಂಡ ರಿವೀಲ್ ಮಾಡಿತ್ತು. ಟೈಟಲ್ ಟೀಸರ್ ರಿಲೀಸ್ ಆಗ್ತಿದ್ದಂತೆ 'ಕೂಲಿ' ಕ್ರೇಜ್ ದುಪ್ಪಟ್ಟಾಯ್ತು. ಅನಿರುದ್ಧ್ ಹಿನ್ನೆಲೆ ಸಂಗೀತ ನೀಡಿದ್ದ ಈ ಟೀಸರ್‌ನಲ್ಲಿ, ಡಿಸ್ಕೋ ಹಾಡನ್ನು ಬಳಸಲಾಗಿತ್ತು. ಅದು ಇಳಯರಾಜಾ(Ilayaraja) ಹಾಕಿದ ಟ್ಯೂನ್ ಹೀಗಾಗಿ 'ಕೂಲಿ' ನಿರ್ಮಾಣ ಸಂಸ್ಥೆಗೆ ಮ್ಯೂಸಿಕ್ ಮಾಂತ್ರಿಕ ಇಳಯರಾಜಾ ಕೃತಿ ಚೌರ್ಯದ ನೋಟಿಸ್(Copyright Notice) ಕಳಿಸಿದ್ದಾರೆ. 1983ರಲ್ಲಿ ರಜನಿಕಾಂತ್(Rajinikanth) ತಂಗಮಗನ್ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾಗೆ ಇಳಯಾರಾಜ ಅವರೇ ಟ್ಯೂನ್‌ಹಾಕಿದ್ರು. ಅದೇ ಸಿನಿಮಾದ ವಾ ವಾ..ಎಂಬ ಹಾಡಿನ ತುಣುಕನ್ನ, ಕೂಲಿಯಲ್ಲಿ ಬಳಸಿಕೊಳ್ಳಲಾಗಿದೆ ಎಂಬುದು ಇಳಯರಾಜಾ ಅವರ ಆರೋಪ. ಕೂಲಿ ಚಿತ್ರದ ಟೀಸರ್‌‌ನಲ್ಲಿ ಇಳಯರಾಜಾ ಅವರ ವಾ ವಾ ಪಾಕಂ ವಾ ಹಾಡನ್ನು ಮರುಸೃಷ್ಟಿ ಮಾಡಲಾಗಿದೆ. ಆದ್ರೆ ಮ್ಯೂಸಿಕ್‌ನ ಮೊದಲ ಮಾಲೀಕ ಇಳಯರಾಜ ಆಗಿದ್ರಿಂದ, ಕೃತಿಚೌರ್ಯದ ಆರೋಪ ಮಾಡಿದ್ದಾರೆ.. ಹೀಗಾಗಿ ನನ್ನಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು, ಇಳಯರಾಜ ಸನ್ ಪಿಕ್ಚರ್ಸ್‌ಗೆ ನೋಟಿಸ್ ಕಳುಹಿಸಿದ್ದಾರೆ. ಸದ್ಯ ನೋಟೀಸ್ ನಲ್ಲಿ ಇದು ಹಕ್ಕುಸ್ವಾಮ್ಯ ಕಾಯಿದೆ 1957ರ ಅಡಿಯಲ್ಲಿ ಅಪರಾಧ ಅಂತ ಹೇಳಲಾಗಿದೆ.

ಇದನ್ನೂ ವೀಕ್ಷಿಸಿ:  Sudeep: ಕಿಚ್ಚನ ಕೋಟೆಗೆ 'ಜೈಲರ್' ಮಾಸ್ಟರ್ ಎಂಟ್ರಿ..!ಆಕ್ಷನ್ ಮೂಡ್‌ನಲ್ಲಿ ಬಾದ್ ಷಾ ಸುದೀಪ್..!