ಇಷ್ಟರಲ್ಲೇ ದೊರೆಯಲಿದೆಯಂತೆ ಗುಡ್ ನ್ಯೂಸ್! : ಕಡಿಮೆಯಾಗುತ್ತಾ ಪೆಟ್ರೋಲ್.. ಡೀಸೆಲ್ ರೇಟು!

ಎಷ್ಟು ಕಡಿಮೆಯಾಗಬಹುದು ಪೆಟ್ರೋಲ್.. ಡೀಸಲ್ ಬೆಲೆ..?
ಅದೊಂದು ಹೇಳಿಕೆಯಲ್ಲಿ ಅಡಗಿದೆ ನೂರೆಂಟು ಗುಟ್ಟು!
ಮೋದಿ ಸರ್ಕಾರದ ಮಹತ್ವದ ನಿರ್ಧಾರ ಹೊರಬೀಳೋದೆಂದು?
 

Share this Video
  • FB
  • Linkdin
  • Whatsapp

ಕೊರೊನಾ ಕಂಟಕದಿಂದ ಜಗತ್ತು ಆಗಷ್ಟೇ ಪಾರಾಗೋಕೆ ಸಜ್ಜಾಗಿತ್ತು. ಆದ್ರೆ ಅದರ ಬೆನ್ನಲ್ಲೇ ಪುಟಿನ್ ಅನ್ನೋ ಪುಣ್ಯಾತ್ಮ ಉಕ್ರೇನ್ ಅನ್ನೋ ಪುಟ್ಟ ದೇಶದ ಮೇಲೆ ಯುದ್ಧ ಸಾರಿಬಿಟ್ಟಿದ್ದ. ಯುದ್ಧವಾಗಿದ್ದೇನೋ, ರಷ್ಯಾ ಉಕ್ರೇನ್ ಮಧ್ಯೆಯೇ, ಆದ್ರೆ ಅದರ ಇಂಪ್ಯಾಕ್ಟ್ ಇಡೀ ಜಗತ್ತಿನ ಮೇಲೇ ಆಯ್ತು. ಅದರಲ್ಲೂ ತೈಲ ರಫ್ತು ಮಾಡ್ತಾ ಇದ್ದ ರಷ್ಯಾ ಇದ್ದಕ್ಕಿದ್ದ ಹಾಗೇ ತನ್ನ ನೀತಿ ಬದಲಾಯಿಸಿದ್ದು, ರಷ್ಯಾ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನ ಕೈಗೆತ್ತಿಕೊಂಡಿದ್ದು, ತೈಲಾಧಾರಿತ ರಾಷ್ಟ್ರಗಳು ರಫ್ತು ನೀತಿಯಲ್ಲಿ ಮಾರ್ಪಾಟು ಮಾಡಿದ್ದು, ಇದೆಲ್ಲವೂ ಮಿಕ್ಸ್ ಆಗಿ, ಪೆಟ್ರೋಲ್ ರೇಟ್ ಜಗತ್ತಿನಾದ್ಯಂತ ಜಾಸ್ತಿ ಆಗ್ತಲೇ ಹೋಯ್ತು. ಆದ್ರೆ ಈಗ ಮೋದಿ ಸರ್ಕಾರ ತೈಲ ಬೆಲೆಯನ್ನು ಇಳಿಸುವ ಸಾಧ್ಯತೆ ಇದ್ದು, ಯಾವಾಗ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. 

ಇದನ್ನೂ ವೀಕ್ಷಿಸಿ: ಮೋದಿ ಸ್ವಾಗತಕ್ಕೆ ರೆಡಿಯಾಗಿದೆ 'ಮೋದಿ ಜೀ ಥಾಲಿ'..! : ಜೂನ್ 21ಕ್ಕೆ ಅಮೆರಿಕಕ್ಕೆ ನಮೋ ಪ್ರವಾಸ

Related Video