ಇತಿಹಾಸ ಬರೆದ ಆರ್ ಆರ್ ಆರ್: ಆಂಗ್ಲರ ನೆಲದಲ್ಲಿ ಮೊಳಗಿದ ದೇಸಿ ನಾಟು

ರಾಜಮೌಳಿ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ವೈರಲ್‌ ಹಾಡಿಗೆ ಆಸ್ಕರ್ ಪ್ರಶಸ್ತಿ. ಆಂಗ್ಲರ ನೆಲದಲ್ಲಿ ಮೊಳಗಿದೆ ದೇಸಿ ನಾಟು ಕಹಳೆ 

First Published Mar 14, 2023, 1:25 PM IST | Last Updated Mar 14, 2023, 1:25 PM IST

ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಆರ್‌ಆರ್‌ಆರ್‌ (RRR) ಚಿತ್ರದ ನಾಟು ನಾಟು ಹಾಡಿಗೆ ಒರಿಜಿನಲ್ ಸಾಂಗ್ ಕ್ಯಾಟಗರಿಯ ಆಸ್ಕರ್ 2023 ಪ್ರಶಸ್ತಿ ಪಡೆದುಕೊಂಡಿದೆ. ಚಿತ್ರದ ನಿರ್ದೇಶಕ ಎಸ್​.ಎಸ್​.ರಾಜಮೌಳಿ, ನಟ ಜೂ.ಎನ್​ಟಿಆರ್, ರಾಮ್ ಚರಣ್​, ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಭಾರತೀಯ ಸಿನಿಮಾ ರಂಗದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.