Asianet Suvarna News Asianet Suvarna News

ಶಾರ್ಟ್ ಸರ್ಕ್ಯೂಟ್‌ನಿಂದ ಮಂಗ ಸಾವು: ಟೋಪಿ, ಟವೆಲ್, ಶರ್ಟ್ ಪ್ಯಾಂಟ್ ತೊಡಿಸಿ ಪೂಜೆ ಮಾಡಿದ ಗ್ರಾಮಸ್ಥರು !

ಶಾರ್ಟ್‌ ಸರ್ಕ್ಯೂಟ್‌ನಿಂದ ಮಗವೊಂದು ಸಾವಿಗೀಡಾಗಿದೆ. ಈ ಮಂಗವನ್ನು ವಾಹನದ ಮೇಲೆ ಕೂರಿಸಿ ವಾದ್ಯಮೇಳಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಿ, ರಾತ್ರಿ ಇಡಿ ಮಂಗನ ಮೃತದೇಹವಿಟ್ಟು ಗ್ರಾಮಸ್ಥರು ಜಾಗರಣೆ ಮಾಡಿದ್ದಾರೆ.
 

First Published Jun 3, 2023, 12:03 PM IST | Last Updated Jun 3, 2023, 12:03 PM IST

ವಿಜಯಪುರ: ವಿದ್ಯುತ್ ಪರಿವರ್ತಕದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮಂಗವೊಂದು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಬ.ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದಲ್ಲಿ ನಡೆದಿದೆ. ಕಣಕಾಲ ಗ್ರಾಮದ ನ್ಯೂ ಹೈಸ್ಕೂಲ್ ಬಳಿ ಘಟನೆ ನಡೆದಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಗ್ರಾಮಸ್ಥರು ಬಂದಿದ್ದು, ಸಾವನ್ನಪ್ಪಿದ ಮಂಗವನ್ನು ಹೊರತೆಗೆಯಲು ಹರಸಾಹಸ ಪಟ್ಟರು. ಜನತೆಯನ್ನು ಹತ್ತಿರ ಸುಳಿಯಲು ಇನ್ನೆರಡು ಮಂಗಗಳು ಬಿಟ್ಟಿಲ್ಲ. ಕೊನೆಗೂ ಹರಸಾಹಸ ಪಟ್ಟು ಮೃತ ಮಂಗನ ದೇಹವನ್ನ ಗ್ರಾಮಸ್ಥರು ಹೊರತೆಗೆದಿದ್ದಾರೆ. ಹನುಮಂತಸ್ವರೂಪಿ ಮಂಗ ಎಂಬ ಕಾರಣಕ್ಕಾಗಿ ಧಾರ್ಮಿಕ ವಿಧಿ ವಿಧಾನದ ಮೂಲಕ ಅಂತ್ಯಕ್ರಿಯೆಯನ್ನು ಗ್ರಾಮಸ್ಥರು ನಡೆಸಿದರು.

ಇದನ್ನೂ ವೀಕ್ಷಿಸಿ: ಎಲೆಕ್ಷನ್ ಮುಗಿಯುತ್ತಿದ್ದಂತೆ ತಾಂಡಾಗಳೇ ಖಾಲಿ.. ಖಾಲಿ: ಮಕ್ಕಳು, ವೃದ್ಧರನ್ನ ಬಿಟ್ಟರೇ ಜನರೆ ಇಲ್ಲ, ಆವರಿಸಿದ ಸ್ಮಶಾನ ಮೌನ !

Video Top Stories