ಭಾರತದ ವಿದೇಶಾಂಗ ನೀತಿ ಈಗ ಹೇಗಿದೆ ? ಸೇನಾ ಬೇಹುಗಾರಿಕಾ ಕಾರ್ಯವೈಖರಿ ಹೇಗಿರುತ್ತೆ ?

ಸೇನಾ ಬೇಹುಗಾರಿಕಾ ತಜ್ಞರಾದ ನಿವೃತ್ತ ಬ್ರಿಗೇಡಿಯರ್‌ ಪಿ.ಟಿ. ಮೋನಪ್ಪ ಏಷ್ಯಾನೆಟ್‌ ಸುವರ್ಣ ನ್ಯೂಸ್ ಜೊತೆ ಇಸ್ರೇಲ್‌ ಹಮಾಸ್‌ ಯುದ್ಧ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದರ ವಿಡಿಯೋ ಇಲ್ಲಿದೆ..
 

First Published Oct 24, 2023, 3:53 PM IST | Last Updated Oct 24, 2023, 3:53 PM IST

ನಿವೃತ್ತ ಬ್ರಿಗೇಡಿಯರ್‌ ಪಿ.ಟಿ. ಮೋನಪ್ಪ ಇಸ್ರೇಲ್‌ ಮತ್ತು ಹಮಾಸ್‌ ಯುದ್ಧ ಸೇರಿದಂತೆ ಭಾರತದ ಸೇನೆಯ ಬಗೆಗಿನ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಭಾರತ ಮುಸ್ಲಿಮರಿಗೆ ತುಂಬಾ ಉತ್ತಮವಾದ ಸ್ಥಳವಾಗಿದೆ ಎಂಬುದು ಅವರಿಗೂ ಗೊತ್ತಿದೆ ಎಂದು ಪಿ.ಟಿ. ಮೋನಪ್ಪ(PT Monappa) ಹೇಳಿದರು. ಪ್ಯಾಲೆಸ್ತೇನ್‌ನಲ್ಲಿ ಕೆಲವರು ಹಮಾಸ್‌(Hamas) ಉಗ್ರರ ಜೊತೆ ಇಲ್ಲ. ಅಲ್ಲದೇ ಉಗ್ರತ್ವವನ್ನು ವಿಜೃಂಭಿಸುವ ಮನಸ್ಥಿತಿ ತುಂಬಾ ಕೆಟ್ಟದಾಗಿದೆ. ಅದು ಯಾವ ದೇಶಕ್ಕೂ ಒಳ್ಳೆಯದಲ್ಲ ಎಂದು ಅವರು ಹೇಳಿದರು. ಭಾರತದ ಮೇಲೆ ಇಸ್ರೇಲ್‌(Israel) ಹಾಗೂ ಉಕ್ರೇನ್‌ ರೀತಿಯ ದಾಳಿ ಆಗೇ ಆಗುತ್ತದೆ. ಯಾಕೆಂದರೆ ಈ ರೀತಿಯ ಯುದ್ಧದಿಂದ ಉಗ್ರರಿಗೆ ಐಡಿಯಾಗಳು ಸಿಕ್ಕಂತಾಗುತ್ತವೆ. ಕಾಶ್ಮೀರದಲ್ಲಿ ನೂರಕ್ಕೆ ನೂರರಷ್ಟು ಇದನ್ನು ಅವರು ಟ್ರೈ ಮಾಡುತ್ತಾರೆ. ಅಲ್ಲದೇ ಮೊಸಾದ್‌ ಮಿಲಿಟರಿಗೂ ನಮಗೂ ತುಂಬಾ ವ್ಯತ್ಯಾಸವಿದೆ ಎಂದು ಪಿ.ಟಿ. ಮೋನಪ್ಪ ಹೇಳಿದರು. 

ಇದನ್ನೂ ವೀಕ್ಷಿಸಿ: ಮಹಿಳಾ ಗ್ಯಾರಂಟಿಗಳ ವಿರುದ್ಧ ಮಹಿಳಾಸ್ತ್ರ.. ಬಿಜೆಪಿ ಇಂಟ್ರೆಸ್ಟಿಂಗ್ ಗೇಮ್ ಪ್ಲಾನ್..!