ಮಹಿಳಾ ಗ್ಯಾರಂಟಿಗಳ ವಿರುದ್ಧ ಮಹಿಳಾಸ್ತ್ರ.. ಬಿಜೆಪಿ ಇಂಟ್ರೆಸ್ಟಿಂಗ್ ಗೇಮ್ ಪ್ಲಾನ್..!
"ಶೋಭಾ"ಯಾತ್ರೆಗೆ ಪ್ಲಾನ್ ಮಾಡಿದ್ಯಾ ಜೆಪಿ ಹೈಕಮಾಂಡ್..?
ಶೋಭಾ ಕರಂದ್ಲಾಜೆ ಬಿಜೆಪಿಯ ಹೊಸ ಸಾರಥಿಯಾಗ್ತಾರಾ..?
ಸಿದ್ದು-ಡಿಕೆ ವಿರುದ್ಧ ನಿಲ್ಲುವ ಸಮರ್ಥ ಸೇನಾನಿ ಇವರೇನಾ..?
ಬೀದರ್'ನಿಂದ ಚಾಮರಾಜನಗರದವರೆಗೆ.. ಕರಾವಳಿಯಿಂದ ಕೋಲಾರದವರೆಗೆ.., ಬೆಂಗಳೂರಿನಿಂದ(Bengaluru) ಬೆಳಗಾವಿವರೆಗೆ.. ಹೀಗೆ ರಾಜ್ಯದ ನಾಲ್ಕೂ ದಿಕ್ಕಿನಲ್ಲಿ ಬಿಜೆಪಿ ಕಾರ್ಯಕರ್ತರ ಪ್ರಶ್ನೆ ಒಂದೇ. ರಾಜ್ಯ ಬಿಜೆಪಿಗೆ(BJP) ಹೊಸ ಅಧ್ಯಕ್ಷ ಯಾರು ಅನ್ನೋದು. ಇದೊಂದು ಮಿಲಿಯನ್ ಡಾಲರ್ ಪ್ರಶ್ನೆಯೂ ಹೌದು, ಈ ಕ್ಷಣದವರೆಗೆ ಚಿದಂಬರ ರಹಸ್ಯವೂ ಹೌದು. ಆ ರಹಸ್ಯಕ್ಕೆ ಉತ್ತರ ಸಿಗೋ ಸಮಯ ಹತ್ತಿರ ಬರ್ತಾ ಇದೆ. ಹೌದು ವೀಕ್ಷಕರೇ.. ಕರ್ನಾಟಕ ಕೇಸರಿ ಪಾಳೆಯದಲ್ಲಿ ಹೊಸ ಸಾರಥಿಯನ್ನು ನೇಮಕ ಮಾಡಲು ಬಿಜೆಪಿ ಹೈಕಮಾಂಡ್ ಕೊನೆಗೂ ಮನಸ್ಸು ಮಾಡಿದ್ಯಂತೆ. ಅಷ್ಟಕ್ಕೂ ಕರ್ನಾಟಕ ಬಿಜೆಪಿಯ ಚುಕ್ಕಾಣಿ ಹಿಡಿಯಲು ಈಗ ಓಡಾಡ್ತಿರೋ ಹೆಸರು ಯಾರದ್ದು ಗೊತ್ತಾ..? ಹಿಂದುತ್ವದ ಫೈಯರ್ ಬ್ರ್ಯಾಂಡ್ ನಾಯಕಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje). ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೂವರೆ ತಿಂಗಳಾಯ್ತು. ಆದ್ರೆ ಸಿದ್ದರಾಮಯ್ಯ ಸರ್ಕಾರವನ್ನು ಸಮರ್ಥವಾಗಿ ಎದುರಿಸಿ ನಿಲ್ಲುವಂತಾ ಪ್ರತಿಪಕ್ಷ ನಾಯಕನಾಗ್ಲೀ, ಬಿಜೆಪಿ ರಾಜ್ಯಾಧ್ಯಕ್ಷರ (BJP State president)ನೇಮಕವಾಗ್ಲೀ ಆಗೇ ಇಲ್ಲ. ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರವಧಿ ವಿಧಾನಸಭಾ ಚುನಾವಣೆಗೂ ಮೊದ್ಲೇ ಮುಗಿದಿದೆ. ಕಟೀಲ್ ಅಧ್ಯಕ್ಷರಾಗಿರೋವಾಗ್ಲೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಇತ್ತ ಹೊಸ ರಾಜ್ಯಾಧ್ಯಕ್ಷರ ನೇಮಕವಾಗಿಲ್ಲ, ಅತ್ತ ಪ್ರತಿಪಕ್ಷ ನಾಯಕ ಯಾರು ಎಂಬ ಪ್ರಶ್ನೆಗೂ ಉತ್ತರವಿಲ್ಲ. ಇದನ್ನೇ ಮುಂದಿಟ್ಟುಕೊಂಡು ಪ್ರತೀ ದಿನ ಕಾಂಗ್ರೆಸ್ ನಾಯಕರು ಬಿಜೆಪಿ ಕಾಲೆಳೆಯುತ್ತಿದ್ದಾರೆ. ಇದು ಬಿಜೆಪಿ ನಾಯಕರಿಗೆ ಭಾರೀ ಮುಜುಗರ ತಂದಿದ್ದು, ಕಾಂಗ್ರೆಸ್ ಟೀಕೆಗೆ ಉತ್ತರ ಕೊಡೋದು ಹೇಗೆ ಅನ್ನೋದೇ ಕೇಸರಿ ಕಲಿಗಳಿಗೆ ಗೊತ್ತಾಗ್ತಿಲ್ಲ. ಆದ್ರೀಗ ಕೊನೆಗೂ ಒಂದು ಪ್ರಶ್ನೆಗೆ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ. ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರ ನೇಮಕ ಇನ್ನು ಕೆಲವೇ ದಿನಗಳಲ್ಲಿ ಆಗಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗ್ತಿದೆ.
ಇದನ್ನೂ ವೀಕ್ಷಿಸಿ: ಹಬ್ಬಕ್ಕೆ ಊರಿಗೆ ಬಂದವನು ಮಟಾಷ್..! ಭೀಮಾ ತೀರದಲ್ಲಿ ಮತ್ತೆ ಚಿಮ್ಮಿತು ಹಸಿ ಹಸಿ ರಕ್ತ..!