ಇಸ್ಲಾಂನ ಸ್ಥಾಪನೆ ಹಮಾಸ್‌ನ ಉದ್ದೇಶಿತ ಗುರಿನಾ ? ಇದು ಉಗ್ರ ಸಂಘಟನೆಯೋ, ರಾಜಕೀಯ ಪಕ್ಷವೋ ?
ಇಸ್ರೇಲ್ ಯುದ್ಧ ಭೂಮಿಯ ರೋಚಕ ಕಥನದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕರಾದ ಅಜಿತ್ ಹನಮಕ್ಕನವರ್ ನ್ಯೂಸ್ ಅವರ್ ಸ್ಪೆಷಲ್‌ನಲ್ಲಿ ಮಾತನಾಡಿದ್ದು, ಇದರ ವಿಡಿಯೋ ಇಲ್ಲಿದೆ..
ಇಸ್ರೇಲ್ ಮತ್ತು ಹಮಾಸ್ ಯುದ್ಧಕ್ಕೆ ಸಂಬಂಧಿಸಿದಂತೆ ಅಜಿತ್ ಹನಮಕ್ಕನವರ್(Ajit hanamakkanavar) ಇಸ್ರೇಲ್‌ಗೆ(Israel) ಹೋಗಿ ವರದಿಯನ್ನು ನೀಡಿದ್ದರು. ಇದಾದ ಬಳಿಕ ಜನರಲ್ಲಿ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇದಕ್ಕೆಲ್ಲಾ ಉತ್ತರಿಸುವ ಕೆಲಸವನ್ನು ಇಲ್ಲಿ ಮಾಡಲಾಗಿದೆ. ಇಸ್ರೇಲ್‌ಗೆ ಹೋಗಿದ್ದೇಕೆ ?, ಪ್ಯಾಲಿಸ್ತೀನ್‌ಗೇಕೆ(Palestinian) ಹೋಗಿಲ್ಲ ? ಇಂತಹ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಲಿದೆ. ಹಿಂಸೆ ಎಂಬುದು ಯಾರಿಗೂ, ಯಾವ ದೇಶಕ್ಕೂ ಮಾದರಿ ಅಲ್ಲ. ಆ ಲ್ಯಾಂಡ್‌ನಲ್ಲಿ ಮೂರು ಧರ್ಮಗಳಿಗೆ ಸಂಬಂಧಿಸಿದೆ. ಹಮಾಸ್(Hamas) ಪ್ಯಾಲಿಸ್ತೀನ್ ಜನರನ್ನು ಪ್ರತಿನಿಧಿಸುವುದಿಲ್ಲ. ಸ್ವತಂತ್ರ ಹೋರಾಟಗಾರನಿಗೆ ಯಾರ ವಿರುದ್ಧ ನನ್ನ ಹೋರಾಟ ಎಂಬುದು ತಿಳಿದಿರಬೇಕು. ಮಕ್ಕಳು, ಮಹಿಳೆಯರನ್ನು ಸ್ವತಂತ್ರ ಹೋರಾಟದ(Freedom Fight) ಹೆಸರಿನಲ್ಲಿ ಕೊಲ್ಲುವುದು ತಪ್ಪು. ಬಾರ್ಬರಿಜಂನನ್ನು ಸ್ವತಂತ್ರ ಹೋರಾಟವೆನ್ನಲು ಆಗುವುದಿಲ್ಲ ಎಂದು ಅಜಿತ್ ಹನಮಕ್ಕನವರ್ ಹೇಳುತ್ತಾರೆ.
ಇದನ್ನೂ ವೀಕ್ಷಿಸಿ: ರಣರಂಗವಾಯ್ತು ಪಂಚಾಯಿತಿ ಮಾಡುತ್ತಿದ್ದ ಮನೆ: ಎರಡು ಕುಟುಂಬದ ಮಧ್ಯೆ ಹೊಡಿಬಡಿ !