ರಣರಂಗವಾಯ್ತು ಪಂಚಾಯಿತಿ ಮಾಡುತ್ತಿದ್ದ ಮನೆ: ಎರಡು ಕುಟುಂಬದ ಮಧ್ಯೆ ಹೊಡಿಬಡಿ !

ಆರ್ ಟಿ ನಗರ ಬಳಿ ಇರುವ ಗಣೇಶ ಬ್ಲಾಕ್‌ನ ಮನೆಯಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಹುಡುಗನ ಮನೆಗೆ ಬಂದ ಹುಡುಕಿ ಕಡೆಯವರು ಪಂಚಾಯಿತಿ ಮಾಡುತ್ತಿದ್ದರು. ಪಂಚಾಯಿತಿ ಮಾಡುವ ಸಮಯದಲ್ಲಿ ಹುಡುಗ ಮದ್ಯ ಸೇವನೆ ಮಾಡಿದ ಆರೋಪ ಕೇಳಿಬಂದಿದೆ. ಈ ವೇಳೆ ಹುಡುಗನ ಮನೆಯವರು ಹುಡುಗಿ ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಕಳೆದ ಎರಡು ವರ್ಷಗಳ ಹಿಂದೆ, ಹೆಸರುಘಟ್ಟ ಬಳಿಯ ಫಾರ್ಮ್ ಹೌಸ್‌ನಲ್ಲಿ ಹುಡುಗಿ ಮನೆಯವರು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ನಂತರ ಪ್ರತಿ ದಿನ ಪತ್ನಿಗೆ ಹುಡುಗ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಐಸ್ ಕ್ರೀಂ, ಫಿಜ್ಜಾ ಕೊಡಿಸುವುದಕ್ಕೂ ಸಹ ಹುಡುಗಿ ಮನೆಯಲ್ಲಿ ಕರೆ ಮಾಡಿ ಹಣ ಕೊಡಿ ಅಂತಿದ್ದನಂತೆ. ಈತನ ಕಾಟಕ್ಕೆ ಸಾಕಷ್ಟು ಬಾರಿ ಪಂಚಾಯಿತಿಯನ್ನು ಕುಟುಂಬಸ್ಥರು ಮಾಡಿದ್ದರು. ಆರ್ ಟಿ ನಗರ ಬಳಿ ಇರುವ ಗಣೇಶ ಬ್ಲಾಕ್‌ನ ಮನೆಯಲ್ಲಿ ಗಲಾಟೆ ನಡೆದಿದೆ. ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ: ಸಿಎಂ-ಡಿಸಿಎಂ ಮಧ್ಯೆ ದೋಸ್ತಿ-ಕುಸ್ತಿ..! ಮಿನಿಸ್ಟರ್ಸ್ ಬ್ರೇಕ್‌ಫಾಸ್ಟ್ ಮೀಟಿಂಗ್ ಕರೆದಿದ್ದೇಕೆ ಸಿದ್ದು..?

Related Video