ಟಿಸಿ ನೀಡಲು ಟಾರ್ಚರ್..ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿ..!
ಒಳ್ಳೆ ಕಾಲೇಜಿನಲ್ಲಿ ಓದಬೇಕು ಅಂತ ಕನಸು ಕಂಡಿದ್ದ.ಆದ್ರೆ ಅ ಕಾಲೇಜಿಗೆ ಸೇರಿ ಒಂದೇ ತಿಂಗಳಿನಲ್ಲಿ ಕಾಲೇಜು ಬಿಡುವ ಪರಿಸ್ಥಿತಿ ನಿರ್ಮಾಣವಾಯ್ತು. ಖಾಸಗಿ ಕಾಲೇಜು ಬಿಟ್ಟು ಸರ್ಕಾರಿ ಕಾಲೇಜಿಗೆ ಸೇರಿದ ಬಡ ವಿದ್ಯಾರ್ಥಿ. ಆದ್ರೆ ವಿದ್ಯಾರ್ಥಿಗೆ ಕಾಲೇಜು ಆಡಳಿತ ಮಂಡಳಿ ಟಿಸಿ ಟಾರ್ಚರ್ ನೀಡಿದೆ.
ಮರದ ಕೆಳಗೆ ಹೀಗೆ ಪುಸಕ್ತ ಹಿಡಿದು ನಿಂತಿರೋ ಈ ವಿದ್ಯಾರ್ಥಿ ಹೆಸರು ಜಯಂತ್(Jayanth). ಒಳ್ಳೆ ಕಾಲೇಜಿನಲ್ಲಿ ಎಂಬಿಎ ಮಾಡಬೇಕೆಂಬ ಕನಸು ಈತನದ್ದು. ಒಂದು ಕಾಲೇಜಿಗೆ ಫೀಸ್ ಕಟ್ಟಿ ಎಂಬಿಎಗೆ ಸೇರಿಕೊಂಡಿದ್ದ. ಕಾಲೇಜು ಸೇರಿದ ಮೇಲೆ ಗೊತ್ತಾಯ್ತು ಈ ಕಾಲೇಜು ಸರಿಯಿಲ್ಲ ಅನ್ನೋದು. ಬೆಂಗಳೂರಿನ ಜಯನಗರದಲ್ಲಿ ಶ್ರೀನಿವಾಸ್ ಯೂನಿವರ್ಸಿಟಿ ಸ್ಟಡಿ ಸೆಂಟರ್(Srinivas University Study Center) ಹೆಸರಿನಲ್ಲಿ ಕಾಲೇಜು ನಡೆಸುತ್ತಿದೆ. ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಈ ಕಾಲೇಜಿನಲ್ಲಿ ಓದುತ್ತಿದ್ದಾರೆ. ಜಯಂತ್ ಕೂಡ ಇದೇ ಶ್ರೀನಿವಾಸ್ ಯೂನಿವರ್ಸಿಟಿ ಸ್ಟಡಿ ಸೆಂಟರ್‌ಗೆ ಎಂಬಿಎಗೆ (MBA)ಸೇರಿಕೊಂಡ. ಆದ್ರಲ್ಲಿ ಮೂಲಭೂತ ಸೌಕರ್ಯ ಕೊರತೆ ಹಾಗೂ ನುರಿತ ಉಪನ್ಯಾಸಕರ ಕೊರತೆ ಸಮಸ್ಯೆ ಕಾಣಿಸಿತು. ಹೀಗಾಗಿ ಫೀಸ್ ಕಟ್ಟಿದ್ದರೂ ಕೂಡ ಆ ಕಾಲೇಜನ್ನೇ ಬಿಡಲು ನಿರ್ಧರಿಸಿದ್ದ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಬಿಎ ಸೀಟು ಕೂಡ ಗಿಟ್ಟಿಸಿಕೊಂಡು ಅಡ್ಮಿಷನ್ ಕೂಡ ಮಾಡಿಸಿದ. ಆದ್ರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಡ್ಮೀಷನ್ ಆಗಲು ಜಯಂತ್ಗೆ ಶ್ರೀನಿವಾಸ ಕಾಲೇಜಿನಲ್ಲಿ(Srinivas College) ಒರಿಜಿನಲ್ ದಾಖಲಾತಿಗಳನ್ನು ಕೊಡಲು ಹಿಂದೇಟು ಹಾಕಿದ್ರು. ಟಿಸಿ ಕೊಡದೇ ಟಾರ್ಚರ್ ಹಿಡಿಸಿದ್ರು. ಆದರೆ ಜಯಂತ್ ಆಗಲೇ ಶ್ರೀನಿವಾಸ್ ಕಾಲೇಜು ಬಿಡುವ ನಿರ್ಧಾರ ಮಾಡಿಯಾಗಿತ್ತು. ಹೀಗಾಗಿ ದಾಖಲಾತಿ ಪಡೆಯಲು ಪೊಲೀಸ್ ಠಾಣೆ ಮೇಟ್ಟಿಲೇರಿದ. ವಕೀಲರ ಮೂಲಕ ಕಾಲೇಜಿಗೆ ಲೀಗಲ್ ನೋಟಿಸ್ ಜಾರಿ ಮಾಡಿಸಿದ. ಆಗ ಶ್ರೀನಿವಾಸ್ ಕಾಲೇಜು ಸಿಬ್ಬಂದಿ ಬಾಕಿ ಶುಲ್ಕ ಕಟ್ಟಿಸಿಕೊಂಡು ಒರಿಜಿನಲ್ ಅಂಕಪಟ್ಟಿ, ಟಿಸಿ ಸೇರಿ ಎಲ್ಲಾ ದಾಖಲಾತಿ ನೀಡಿದ್ದಾರೆ. ಆದ್ರೆ ತನಗೆ ಟಾರ್ಚರ್ ಕೊಟ್ಟ ಕಾಲೇಜಿಗೂ ಜಯಂತ್ ಪಾಠ ಕಲಿಸಲು ಮುಂದಾಗಿದ್ದಾನೆ . ಅನುಮತಿ ಪಡೆಯದೇ ಶ್ರೀನಿವಾಸ ಕಾಲೇಜು ನಡೆಸಲಾಗುತ್ತಿದೆ ಎಂದು ಹೋರಾಟಕ್ಕೆ ಸಜ್ಜಾಗಿದ್ದು ಶ್ರೀನಿವಾಸ ಕಾಲೇಜು ಆಡಳಿತ ಮಂಡಳಿಗೆ ಸಂಕಷ್ಟ ಶುರುವಾಗಿದೆ. ಕಾಲೇಜಿಗೆ ಅನುಮತಿ ವಿಚಾರ ಪ್ರಶ್ನಿಸಿದಾಗ ಶ್ರೀನಿವಾಸ ಕಾಲೇಜಿನ ಡೀನ್ ಡಾ.ಪ್ರಸಾದ್ ತಡಬಡಿಯಿಸಿದ್ರು.
ಇದನ್ನೂ ವೀಕ್ಷಿಸಿ: ರಾಕಿಂಗ್ ಸ್ಟಾರ್ ರಂಗಿಗೆ ಇನ್ನೆಷ್ಟು ದಿನ ಕಾಯಬೇಕು ? ದಸರಾಗೆ ಅನೌನ್ಸ್ ಆಗುತ್ತಾ ರಾಕಿ 19ನೇ ಚಿತ್ರ?