Asianet Suvarna News Asianet Suvarna News

ಎದೆ ಝಲ್ ಎನಿಸುವ ಭಯಂಕರ ಪ್ರವಾಹದ 15 ಭೀಕರ ದೃಶ್ಯಗಳು! ಮಹಾಮಳೆಗೆ ಏಕಾಏಕಿ ಕುಸಿದು ಬಿತ್ತು ಬೃಹತ್ ಕಟ್ಟಡ!

ಸೇತುವೆ ದಾಟುತ್ತಿದ್ದ ಪುಟ್ಟ ಬಾಲಕ ನೀರಿನಲ್ಲಿ ಕೊಚ್ಚಿ ಹೋದ..!
ರಣ ಭೀಕರ ಪ್ರವಾಹದಲ್ಲಿ ಕಣ್ಣೆದುರೇ ಕೊಚ್ಚಿ ಹೋದ ಜನರು..!
ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ 2 ಹಸು, ಶ್ವಾನದ ರಕ್ಷಣೆ..!

First Published Jul 22, 2024, 10:17 AM IST | Last Updated Jul 22, 2024, 10:18 AM IST

ಕಾವೇರಿ ನದಿಯಲ್ಲಿ ಯುವಕನೊಬ್ಬ ಕೊಚ್ಚಿ ಹೋದ್ರೆ. ಸೇತುವೆ ದಾಟುತ್ತಿದ್ದ ಪುಟ್ಟ ಬಾಲಕ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಮತ್ತೊಂದೆಡೆ ಏಕಾಏಕಿ ನುಗ್ಗಿ ಬಂದ ಪ್ರವಾಹದಲ್ಲಿ(Flood) ಸಿಲುಕಿ ಜನ ಕೊಚ್ಚಿ ಕೊಂಡು ಹೋದ್ರೆ, ಕಣ್ಣೆದುರೇ ಕಾರೊಂದು(Car) ನದಿಯಲ್ಲಿ ತೇಲಿ ಹೋಗಿದೆ. ಇನ್ನು ಈ ರಣ ಚಂಡಿ ಪ್ರವಾಹ ಮನುಷ್ಯರು ಮಾತ್ರವಲ್ಲದೆ ಮೂಕಪ್ರಾಣಿಗಳನ್ನೂ ಬಿಟ್ಟು ಬಿಡದೆ ಕಾಡ್ತಿದೆ. ಒಂದುಕಡೆ ಪ್ರವಾಹದಲ್ಲಿ ನಿಲುಕಿದ್ದ ಶ್ವಾನದ ರಕ್ಷಣೆ ಮಾಡಿದ್ರೆ. ಮತ್ತೊಂದೆಡೆ  ಕೊಚ್ಚಿ ಹೋಗ್ತಿದ್ದ ಹಸುಗಳನ್ನು(Cows) ರಕ್ಷಣೆ ಮಾಡಲಾಗಿದೆ. ಇದಷ್ಟೆ ಅಲ್ಲದೇ ಭೀಕರ ಪ್ರವಾಹದಲ್ಲಿ ದೊಡ್ಡ ನೀರಿನ ಟ್ಯಾಂಕರ್, ಟ್ರಾಲಿ ಸಮೇತ ಕೊಚ್ಚಿಕೊಂಡು ಹೋಗುವ ದೃಶ್ಯ ನೋಡುಗರ ಎದೆ ಝಲ್ ಅನ್ನುವಂತೆ ಮಾಡಿದೆ. ಮಹಾಮಳೆಯಿಂದ(Rain) ಭೀಕರ ಪ್ರವಾಹ ಉಂಟಾಗಿದ್ದು, ಯುವಕರ ಗುಂಪೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗ್ತಿದ್ದ ಬೈಕನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಮತ್ತೊಂದೆಡೆ ಕೃಷ್ಣ ನದಿಯಲ್ಲಿ ಮೊಸಳೆಗಳು ನುಗ್ಗಿ ಬಂದಿದ್ದು, ನೀರಿಗಿಳಿದಿದ್ದ ವ್ಯಕ್ತಿ ಜಸ್ಟ್ ಮಿಸ್ ಆಗಿ ಬಚಾವ್ ಆಗಿದ್ದ. ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗ್ತಿದ್ದು ನೋಡ ನೋಡುತ್ತಲೆ ಮಹಾಮಳೆಗೆ ಮನೆಗಳು ಕುಸಿದು ಬೀಳ್ತಿವೆ. ಮತ್ತೊಂದೆಡೆ ಮತ್ತೊಂದೆಡೆ ಭರಚುಕ್ಕಿ ಜಲಪಾತ ಸ್ಥಳದಲ್ಲಿ ಅಪಾಯವನ್ನೂ ಲೆಕ್ಕಿಸದೆ ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸ್ಕೊಳ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ನಿಜವಾಯ್ತು ‘ಅರ್ಚಕ’ವಾಣಿ, ಒಲಿದಳು ಮಾರಿಯಮ್ಮ ದೇವಿ! ಕರ್ನಾಟಕದ ಅಳಿಯ ಈಗ ಭಾರತ ಟಿ20 ತಂಡದ ನಾಯಕ!