ನಿಜವಾಯ್ತು ‘ಅರ್ಚಕ’ವಾಣಿ, ಒಲಿದಳು ಮಾರಿಯಮ್ಮ ದೇವಿ! ಕರ್ನಾಟಕದ ಅಳಿಯ ಈಗ ಭಾರತ ಟಿ20 ತಂಡದ ನಾಯಕ!

ಸೂರ್ಯಕುಮಾರ್ ಯಾದವ್‌ಗೆ ಕೃಪೆ ತೋರಿದ ಕಾಪು ಮಾರಿಯಮ್ಮ..!
ಅಮ್ಮನ ಸನ್ನಿಧಿಗೆ ಬಂದ ಮುಂಬೈಕರ್‌ಗೆ ಒಲಿಯಿತು ಕ್ಯಾಪ್ಟನ್ ಕಿರೀಟ..!
ಮಾರಿಯಮ್ಮ ದೇವಿಗೆ ಕಂಬದ ಕಾಣಿಕೆ ಅರ್ಪಿಸಿದ್ದ ಸೂರ್ಯ ದಂಪತಿ..!

First Published Jul 22, 2024, 9:17 AM IST | Last Updated Jul 22, 2024, 9:18 AM IST

ಕರ್ನಾಟಕದ ಅಳಿಯನಿಗೆ ಭಾರತ ಟಿ20 ತಂಡದ ನಾಯಕನ ಪಟ್ಟ ಒಲಿದಿದೆ.  ಸೂರ್ಯಕುಮಾರ್ ಯಾದವ್‌ಗೆ(Suryakumar Yadav) ಉಡುಪಿಯ ಕಾಪು ಮಾರಿಯಮ್ಮ(Kapu mariyamma) ದೇವಿ ಕೃಪೆ ತೋರಿದ್ದಾಳೆ. ಅಲ್ಲದೇ ‘ಅರ್ಚಕ’ವಾಣಿ ನಿಜವಾಣಿ. ಉತ್ತರ ಪ್ರದೇಶದ ಸೂರ್ಯಕುಮಾರ್‌ ಯಾದವ್‌ ಉಡುಪಿಯ ದೇವಿಶಾ ಶೆಟ್ಟಿ(Devisha shetty) ಪ್ರೀತಿಸಿ ಮದುವೆಯಾದವರು. ಕಾಪು ಮಾರಿಯಮ್ಮನ ದರ್ಶನ ಪಡೆದ ಹತ್ತೇ ದಿನಗಳಲ್ಲಿ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ. ನೀವು ಮುಂದಿನ ದಿನಗಳಲ್ಲಿ ಕ್ಯಾಪ್ಟನ್ ಆಗ್ತೀರಿ ಅನ್ನೋ ಅರ್ಚಕವಾಣಿ ನಿಜವಾಗಿದೆ. ಅಂದ ಹಾಗೆ ಮುಂಬೈಕರ್ ಸೂರ್ಯನನ್ನು ಮಾರಿಯಮ್ಮನ ಸನ್ನಿಧಿಗೆ ಕರೆ ತಂದವರು ಪತ್ನಿ ದೇವಿಶಾ ಶೆಟ್ಟಿ. ಮೂರು ವರ್ಷಗಳ ಹಿಂದೆ ಟೀಮ್ ಇಂಡಿಯಾಗೆ ಪದಾರ್ಪಣೆ. ಮೂರೇ ವರ್ಷಗಳಲ್ಲಿ ಭಾರತ ಟಿ20 ತಂಡದ ನಾಯಕ.

ಇದನ್ನೂ ವೀಕ್ಷಿಸಿ: ಉಕ್ಕಿ ಹರಿಯುತ್ತಿರೋ ನೀರ ಮಧ್ಯದಲ್ಲಿ ಸಿಕ್ಕಾಕಿಕೊಂಡ ಪೋರರು! ರಕ್ಷಣೆಗೆ ನೀರಲ್ಲಿ ಇಳಿದವನ ಜೀವಕ್ಕೆನೇ ಕಾದಿತ್ತು ಅಪಾಯ!

Video Top Stories