Asianet Suvarna News Asianet Suvarna News

ಮಳೆ ..ಬೆಳೆ ಇಲ್ಲ..ಅನ್ನದಾತ ಕಂಗಾಲು: ರೈತರ ಕೈ ಸೇರದ ಬರ ಪರಿಹಾರ..!

ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ಅನ್ನದಾತರ ಬವಣೆ ಹೇಳತೀರದಾಗಿದೆ.ಚಾಮರಾಜನಗರ ಜಿಲ್ಲೆಯ ನಾಲ್ಕು ತಾಲೂಕುಗಳು ಬರ ಪೀಡಿತ ಅಂತ ಘೋಷಿಸಿದ್ರೂ ರೈತರಿಗೆ ಬರ ಪರಿಹಾರ ಮಾತ್ರ ಸಿಕ್ಕಿಲ್ಲ.

ಸಾಲಸೂಲ ಮಾಡಿ ಬಿತ್ತನೆ ಮಾಡಿದ ರೈತ. ಮಳೆಯಿಲ್ಲದೆ(Rain) ಸೊರಗಿದ ಬೆಳೆ. ದಿಕ್ಕು ತೋಚದೆ ಕಂಗಾಲಾದ ಅನ್ನದಾತ(Farmer). ಹೌದು, ಚಾಮರಾಜನಗರ(Chamarajanagar) ಜಿಲ್ಲೆ ವ್ಯಾಪ್ತಿಯ ರೈತರು ಮಳೆಯಿಲ್ಲದೆ ಬೆಳೆ(Crops)ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಗುಂಡ್ಲುಪೇಟೆ ಹಾಗೂ ಕೊಳ್ಳೆಗಾಲ ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಮೆಕ್ಕೆಜೋಳ, ಸೂರ್ಯಕಾಂತಿ, ಕಬ್ಬು ಬೆಳೆ ನೀರಿಲ್ಲದೆ ಒಣಗಿ ನಿಂತಿವೆ. ಈಗಾಗ್ಲೆ ಸರ್ಕಾರ ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಚಾಮರಾಜನಗರ ತಾಲೂಕುಗಳನ್ನ ಬರ ಪೀಡಿತ ಅಂತ ಘೋಷಿಸಿದೆ. ಅಲ್ಲದೆ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ. ಆದ್ರೆ ಬರ ಅಧ್ಯಯನ ನಡೆಸಿ ತಿಂಗಳುಗಳು ಕಳೆದ್ರೂ ರೈತರ ಖಾತೆಗೆ ಒಂದೇ ಒಂದು ರೂಪಾಯಿ ಸಹ ಜಮೆ ಆಗಿಲ್ಲ. ಪರಿಹಾರದ ಭರವಸೆಯಲ್ಲಿದ್ದ ರೈತರು ಅತ್ತ ಸಾಲ ತೀರಿಸಲಾಗದೆ ಇತ್ತ ಬರ ಪರಿಹಾರವೂ ಸಿಗದೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ರೈತರಿಗೆ ಪರಿಹಾರದ ಭರವಸೆ ನೀಡಿದ್ದ ಸರ್ಕಾರ ಈಗ ಜಾಣ ಮೌನ ವಹಿಸಿದ್ದು, ಇದರಿಂದಾಗಿ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಶೀಘ್ರವೇ ಬರ ಪರಿಹಾರ ಬಿಡುಗಡೆ ಮಾಡಿ ನಮ್ಮ ನೆರವಿಗೆ  ನಿಲ್ಲಬೇಕು ಅನ್ನೋದು ರೈತರ ಆಗ್ರಹವಾಗಿದೆ. 

ಇದನ್ನೂ ವೀಕ್ಷಿಸಿ:  ಕುರುಗೋಡು ಪುರಸಭೆಯಲ್ಲಿ ದಾಖಲೆಗಳ ಗೋಲ್ಮಾಲ್..? ಪುರಸಭೆ ಸದಸ್ಯರಿಂದಲೇ ಬಯಲಾಯ್ತು ಕರಾಳ ಸತ್ಯ !

Video Top Stories