Asianet Suvarna News Asianet Suvarna News

ಕುರುಗೋಡು ಪುರಸಭೆಯಲ್ಲಿ ದಾಖಲೆಗಳ ಗೋಲ್ಮಾಲ್..? ಪುರಸಭೆ ಸದಸ್ಯರಿಂದಲೇ ಬಯಲಾಯ್ತು ಕರಾಳ ಸತ್ಯ !

ಸರ್ಕಾರಿ ದಾಖಲೆಗಳು ಅಂದ್ರೆ ಸರ್ಕಾರಿ ಕಚೇರಿಯಲ್ಲಿರಬೇಕು. ಏನೇ ವ್ಯವಹಾರ ಇದ್ರೂ ಸರ್ಕಾರಿ ಕಚೇರಿಯಿಂದಲೇ ಆಗಬೇಕು. ಆದ್ರೆ ಕುರುಗೋಡು ಪುರಸಭೆ ದಾಖಲೆಗಳು ಕಂಪ್ಯೂಟರ್ ಸೆಂಟರ್‌ನಲ್ಲಿ ಪತ್ತೆಯಾಗಿದೆ.

ಕಂಪ್ಲಿ ಪಟ್ಟಣದ ಖಾಸಗಿ ಕಂಪ್ಯೂಟರ್ ಸೆಂಟರ್. ಆದ್ರೆ ಇಲ್ಲಿ ಮಾಡ್ತಿರೋದು ಮಾತ್ರ ಕುರುಗೋಡು ಪುರಸಭೆ ದಾಖಲೆ(Municipal documents) ಪತ್ರಗಳ ತಿದ್ದುಪಡಿ ಕೆಲಸ. ಪುರಸಭೆ ಕಾರ್ಯಾಲಯದಲ್ಲಿ ನಡೆಯಬೇಕಾದ ಎಲ್ಲಾ ಕೆಲಸಗಳೂ ಕಂಪ್ಲಿ ಕಂಪ್ಯೂಟರ್ ಸೆಂಟರ್‌ನಲ್ಲಿ(Kampli Computer Center) ಮಾಡಲಾಗ್ತಿದೆ. ಪುರಸಭೆ ಚೀಫ್ ಆಫೀಸರ್ ಲಾಗಿನ್ ಇಲ್ಲದೆ ಯಾವುದೇ ಸಾಫ್ಟ್‌ವೇರ್ ಓಪನ್ ಆಗಲ್ಲ. ಆದ್ರೂ ಕುರುಗೋಡಿನಿಂದ 30 ಕಿಲೋಮೀಟರ್ ದೂರವಿರೋ ಕಂಪ್ಯೂಟರ್ ಸೆಂಟರ್‌ನಲ್ಲಿ ದಾಖಲೆಗಳ ತಿದ್ದುಪಡಿ ಮಾಡಲಾಗ್ತಿದೆ. ಪುರಸಭೆ ಚೀಫ್ ಆಫೀಸರ್ ವಿಜಯಲಕ್ಷ್ಮಿಗೆ ಗೊತ್ತಿಲ್ಲದೇ ಇಷ್ಟೆಲ್ಲಾ ನಡೆಯಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ದಾಖಲೆಗಳ ಗೋಲ್ಮಾಲ್ ಕೆಲಸ ನಡೀತಿದೆ ಅನ್ನೋದು ಪುರಸಭೆ ಸದಸ್ಯರ ಆರೋಪ. ಕಳ್ಳ ವ್ಯವಹಾರ ಇರುವ ಕಾರಣಕ್ಕೆ ದಾಖಲೆಗಳನ್ನು ಹೊರಗೆ ಕಳಿಸಿ ತಿದ್ದುಪಡಿ ಮಾಡಿಸುತ್ತಿದ್ದಾರೆ ಅನ್ನೋದು ಪುರಸಭೆ ಸದಸ್ಯರ ಆರೋಪ. ಆದ್ರೆ, ಪುರಸಭೆಯಲ್ಲಿ ಕಂಪ್ಯೂಟರ್ ಆಪರೇಟರ್ ಇಲ್ಲದ ಕಾರಣ ಹೊರಗೆ ಕಳಿಸಿದ್ದೇವೆ ಅಂತ ಅಧಿಕಾರಿಗಳು ಸಮಜಾಯಿಷಿ ಕೊಡ್ತಿದ್ದಾರೆ. ಅನಿವಾರ್ಯವಿದ್ರೆ ಕುರುಗೋಡು ಕಂಪ್ಯೂಟರ್ ಸೆಂಟರ್ನಲ್ಲೇ ಕಫ್ಯೂಟರ್ ಆಪರೇಟರ್‌ ಕರೆಯಿಸಿ ಮಾಡಿಸಬಹುದಿತ್ತಲ್ವಾ..? ಕಂಪ್ಲಿ ಕಂಪ್ಯೂಟರ್ ಸೆಂಟರ್‌ಗೆ ಕಳಿಸಿದ್ದೇಕೆ ಅಂದ್ರೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಇದನ್ನೆಲ್ಲಾ ನೋಡ್ತಿದ್ರೆ ಇಲ್ಲೇನೋ ನಡೀತಿದೆ. ಪುರಸಭೆ ವ್ಯಾಪ್ತಿಯಲ್ಲಿ ಬಾರೀ ಗೋಲ್ಮಾಲ್ ವಾಸನೆ ಹೊಡೀತಿದೆ. ಈ ಬಗ್ಗೆ ತನಿಖೆ ನಡೆಸಿ, ಸತ್ಯ ಹೊರಬರಲಿ ಅನ್ನೋದು ಸಾರ್ವಜನಿಕರ ಒತ್ತಾಯ.

ಇದನ್ನೂ ವೀಕ್ಷಿಸಿ:  ಟಾಲಿವುಡ್‌ನಲ್ಲಿ ಶುರುವಾಯ್ತು ಆಶಿಕಾ ಕ್ರೇಜ್..! ರಶ್ಮಿಕಾರಂತೆ ಮಿಂಚಿದ ಪಟಾಕಿ ಪೋರಿ !

Video Top Stories