ಗೆಳೆಯರ ಭೇಟಿಗೆ ಬ್ರೇಕ್ ಹಾಕಿದ್ರಾ ಜೈಲಾಧಿಕಾರಿಗಳು..? ದರ್ಶನ್‌ಗೆ ಪ್ರದೂಷ್ ಹೇಳಿದ್ದೇನು..? ಮಾಡಿದ್ದೇನು..?

ಗ್ಯಾಂಗ್‌ ನಿಂದ ದರ್ಶನ್‌ನನ್ನು ದೂರ ಮಾಡಿದ್ನಾ ಪ್ರದೂಷ್..?
ಗ್ಯಾಂಗ್ ಒಗ್ಗಟ್ಟಿನ ನಂತರ ಕಂಗೆಟ್ಟ ದರ್ಶನ್ ಮಾಡಿದ್ದೇನು..? 
ಜೈಲಿನಲ್ಲಿ ಆಪ್ತ ಗೆಳೆಯನೊಂದಿಗೆ ದರ್ಶನ್ ಊಟ..ಮಾತು !

Share this Video
  • FB
  • Linkdin
  • Whatsapp


ದರ್ಶನ್ ಜೈಲಿನಲ್ಲೂ ತನ್ನ ಹುಚ್ಚಾಟ ಬಿಟ್ಟಂತಿಲ್ಲ. ದರ್ಶನ್ (Darshan) ಮೊನ್ನೆ ಆ ಒಬ್ಬ ಆರೋಪಿ ಮೇಲೆ ರೇಗಾಡಿದ್ದಾನಂತೆ. ಅವನಿಂದಲೇ ಜೈಲಿಗೆ(Parappana Agrahara jail) ಬಂದಿದ್ದೆಂದು ಕೂಗಾಡಿದ್ದಾನಂತೆ. ದರ್ಶನ್ ಹೀಗೆ ಕೂಗಾಡ್ತಿದ್ದಂತೆ ಉಳಿದೆಲ್ಲ ಆರೋಪಿಗಳು ಒಗ್ಗಟ್ಟಾಗಿದ್ದಾರೆ. ಆಗ ಭಯಬಿದ್ದ ದರ್ಶನ್ ಮತ್ತೆ ಎಲ್ಲರೊಂದಿಗೂ ಸಂಧಾನ ಮಾಡಿಕೊಂಡನಂತೆ. ಅದ್ದೂರಿ ಲೈಫ್ ಲೀಡ್ ಮಾಡಿದ್ದ ಒಬ್ಬ ಸ್ಟಾರ್ ನಟ, ಈಗ ಜೈಲಿನಲ್ಲಿ ಹೇಗಿದ್ದಾನೆ ಅನ್ನೋದನ್ನು ತಿಳಿಯುವ ಕುತೂಹಲ ಸಹಜ. ಹಾಗೆನೇ ಹೊರಗಡೆ ಇದ್ದಾಗ ನಾನೇ ಇಂದ್ರ, ನಾನೇ ಚಂದ್ರ ಎಂಬ ಭ್ರಮೆಯಲ್ಲಿದ್ದ ನಟನೊಬ್ಬ, ಕೊಲೆ ಕೇಸ್‌ನಲ್ಲಿ(Renukaswamy murder case) ಜೈಲು ಸೇರಿದ್ದಾನೆಂದ್ರೆ ಅಲ್ಲಿ ಹೇಗಿದ್ದಾನೆ ಅನ್ನೋ ಕೆಟ್ಟ ಕುತೂಹಲ ಇನ್ನೂ ಹೆಚ್ಚಿರುತ್ತೆ. ಜೈಲಿಗೆ ಹೋದ್ಮೇಲೆ ಏನೆಲ್ಲ ಬದಲಾಗಿದ್ದಾನೆ, ಜೈಲಿಗೆ ಹೋದ್ಮೇಲೆ ಕೋಪ ಕಮ್ಮಿ ಆಯ್ತಾ, ಜೈಲಿಗೆ ಹೋದ್ಮೇಲೆ ನಿತ್ಯ ಜೀವನ ಹೇಗೆ ಬದಲಾಗಿದೆ ಎಂದೆಲ್ಲ ತಿಳಿದುಕೊಳ್ಳುವ ಆಸೆ. ಆದ್ರೆ ಈ ದರ್ಶನ್ ಬಗ್ಗೆ ನಿಮಗೆ ಒಂದೇ ಮಾತಲ್ಲಿ ಹೇಳಬೇಕೆಂದ್ರೆ ದರ್ಶನ್ ಹೊರಗಾದ್ರು ಇರ್ಲಿ, ಒಳಗಾದ್ರು ಇರ್ಲಿ ಅವನಿಗೆ ಅದ್ಯಾವುದು ಮ್ಯಾಟರೇ ಆಗಲ್ಲ, ದರ್ಶನ್ ಎಲ್ಲಿದ್ರೂ ದರ್ಶನ್‌ಯೇ. ಯಾಕೆಂದ್ರೆ ದರ್ಶನ್ ಮೊನ್ನೆ ಜೈಲಿನಲ್ಲೇ ಆರೋಪಿಯೊಬ್ಬನ ಮೇಲೆ ಸಿಕ್ಕಾಪಟ್ಟೆ ಕೂಗಾಡಿದ್ದಾನೆಂದು ಹೇಳಲಾಗುತ್ತಿದೆ.

ಇದನ್ನೂ ವೀಕ್ಷಿಸಿ: ಕುಸಿಯುತ್ತಿದೆ ಶಿರಾಡಿ ಘಾಟ್..ನಡುಗುತ್ತಿವೆ ಬೆಟ್ಟದ ರಸ್ತೆಗಳು..! ಮನೆ ಗೋಡೆ ಕುಸಿದು ಮಲಗಿದ್ದವರ ದಾರುಣ ಅಂತ್ಯ..!

Related Video