ಕುಸಿಯುತ್ತಿದೆ ಶಿರಾಡಿ ಘಾಟ್..ನಡುಗುತ್ತಿವೆ ಬೆಟ್ಟದ ರಸ್ತೆಗಳು..! ಮನೆ ಗೋಡೆ ಕುಸಿದು ಮಲಗಿದ್ದವರ ದಾರುಣ ಅಂತ್ಯ..!

ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕಣ್ಣೆದುರೇ ಕೊಚ್ಚಿ ಹೋಯ್ತು ಹಸು..!
ನಂಜನಗೂಡಲ್ಲಿ ಪ್ರವಾಹ ಭೀತಿ,ತೇಲಿ ಬಂತು ಹಸುವಿನ ಮೃತ ದೇಹ..! 
ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಎಮ್ಮೆಗಳನ್ನು ದಡಕ್ಕೆ ಕರೆತಂದ ರೈತ..!

First Published Jul 20, 2024, 10:13 AM IST | Last Updated Jul 20, 2024, 10:13 AM IST

ರಾಜ್ಯಾದ್ಯಂತ ವರಣಾರ್ಭಟ ಜೋರಾಗಿದೆ. ಅದ್ರಲ್ಲೂ ಕರಾವಳಿ, ಮಲೆನಾಡು ಭಾಗದಲ್ಲಂತೂ ಜಲಾರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಉಕ್ಕಿ ಹರಿಯುತ್ತಿರುವ ನದಿಗಳು ರೌದ್ರರೂಪ ತಾಳಿದ್ದು, ಗುಡ್ಡ ಕುಸಿತದಿಂದ ಹಲವರು ಮೃತಪಟ್ಟಿದ್ದಾರೆ. ಶಿರಾಡಿಘಾಟ್‌ನಲ್ಲಿ ಕಾರ್ ಮೇಲೆ ಗುಡ್ಡ ಕುಸಿದ್ರೆ, ಮನೆಯಲ್ಲಿ ಮಲಗಿದ್ದವರ ಮೇಲೆ ಮನೆ(House) ಕುಸಿದು ಬಿದ್ದಿದೆ. ಅಷ್ಟೇ ಅಲ್ಲದೇ ಕಣ್ಣೆದುರೇ ಹಸು ಪ್ರವಾಹದಲ್ಲಿ(Flood) ಕೊಚ್ಚಿಕೊಂಡು ಹೋಗಿದೆ. ಇನ್ನೂ ಇತ್ತ ಕರಾವಳಿಯೇ ಬೆಚ್ಚಿ ಬೀಳುವ ಮಳೆಯಾಗ್ತಿದ್ದು, ಈ ಪುನರ್ವಸು ಮಳೆಯ (Rain)  ಅಟ್ಟಹಾಸಕ್ಕೆ ಆಕಾಶದೆತ್ತರದ ಬೆಟ್ಟಗುಡ್ಡಗಳೇ ಧರಾಶಾಹಿಯಾಗ್ತಿದೆ. ಈ ಪುನರ್ವಸು ಮಳೆಗೆ ಇಡಿ ಮಲೆನಾಡು, ಕರಾವಳಿ ಭಾಗವೇ ತತ್ತರಿಸಿ ಹೋಗಿದ್ದು, ಬರಿದಾಗಿದ್ದ ನದಿಗಳು ಉಗ್ರರೂಪ ಪಡೆದುಕೊಂಡು ಜಲದಿಗ್ಬಂಧನ ಹಾಕಿವೆ. ರೋಡ್‌ಗಳ ಮೇಲೆ ರಭಸವಾಗಿ ಹರಿಯುತ್ತಿರುವ ನದಿ, ಊರು ಕೇರಿ ಎನ್ನದೇ ಎಲ್ಲವನ್ನೂ ಮುಳುಗಿಸಿ ರಣ ಕೇಕೆ ಹಾಕ್ತಿದ್ದಾನೆ ವರುಣ. ಜೀವನದಿಗಳು ಉಗ್ರರೂಪ ತಾಳಿದ್ದು, ದೇವಸ್ಥಾನಕ್ಕೂ ವರುಣ ಜಲ ದಿಗ್ಬಂಧನ ಹಾಕಿದ್ದಾನೆ.

ಇದನ್ನೂ ವೀಕ್ಷಿಸಿ:  ರೀಲ್ಸ್ ಹುಚ್ಚಿಗೆ ಬಿದ್ದ ಮಹಾಶಯ ಮಾಡಿದ್ದ ಹುಚ್ಚಾಟ ಏನು..? ರೀಲ್ಸ್ ಮಾಡುವವರೇ ಎಚ್ಚರ..ಎಚ್ಚರ..ಎಚ್ಚರ..!