ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪಾಕಿಸ್ತಾನ ಗದ್ದಲ ! ಟಿಕೆಟ್‌ ನೀಡುವ ವಿಚಾರವಾಗಿ ಜಟಾಪಟಿ

ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಂಡೆಕ್ಟರ್‌ ಮುಸ್ಲಿಂ ಮಹಿಳೆಯೊಬ್ಬರಿಗೆ ನೀವೇನು ಪಾಕಿಸ್ತಾನದಲ್ಲಿ ಇಳಿಯುತ್ತೀರಾ ಎಂದು ಕೇಳಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
 

Share this Video
  • FB
  • Linkdin
  • Whatsapp

ಶಿವಮೊಗ್ಗ: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪಾಕಿಸ್ತಾನ(pakisthan) ವಿಚಾರವಾಗಿ ಗಲಾಟೆ ನಡೆದಿದೆ. ಸರ್ಕಾರಿ ಬಸ್‌ನಲ್ಲಿ ಪಾಕಿಸ್ತಾನ ಸಂಬಂಧ ಬರಲು ಕಾರಣವಾಗಿದ್ದು, ಕಂಡೆಕ್ಟರ್‌(Conducter) ಮಾತಾಗಿದೆ. ಟಿಕೆಟ್‌(Ticket) ನೀಡುವಾಗ ಕಂಡೆಕ್ಟರ್‌ ನೀವೇನು ಪಾಕಿಸ್ತಾನದಲ್ಲಿ ಇಳಿತೀರಾ ಎಂದು ಕೇಳಿದ್ದಾರೆ. ಇದಕ್ಕೆ ಮಹಿಳೆ ನೀವೇನು ಪಾಕಿಸ್ತಾನದಲ್ಲಿ ಬಸ್‌ ಓಡಿಸುತ್ತೀರಾ ಎಂದು ಕೇಳಿದ್ದಾಳೆ. ಶಿವಮೊಗ್ಗದಿಂದ ಭದ್ರಾವತಿಗೆ ಹೋಗುವ ಕೆಎಸ್ಆರ್‌ಟಿಸಿ(KSRTC) ಬಸ್‌ನಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗದಿಂದ(Shivamogga) ಭದ್ರಾವತಿಗೆ ಬುರ್ಖಾಧಾರಿ ಮುಸ್ಲಿಂ ಮಹಿಳೆ ಬಸ್ ಹತ್ತಿದ್ದಳು. ಇಬ್ಬರು ಮುಸ್ಲಿಂ ಮಹಿಳೆಯರು ಅಕ್ಕಪಕ್ಕದಲ್ಲಿ ಕುಳಿತಿದ್ದರಿಂದ, ಕಂಡೆಕ್ಟರ್ ಇಬ್ಬರಿಗೂ ಒಂದೇ ಟಿಕೆಟ್ ಕೊಟ್ಟಿದ್ದಾರೆ. ಆಗ ಓರ್ವ ಮುಸ್ಲಿಂ ಮಹಿಳೆ ಇಬ್ಬರಿಗೂ ಒಂದೇ ಟಿಕೆಟ್ ಯಾಕೆ ಕೊಟ್ಟಿದ್ದೀರಾ? ಒಬ್ಬೊಬ್ಬರು ಒಂದೊಂದು ಕಡೆ ಇಳಿಯುವುದರಿಂದ ಚೆಕ್ಕಿಂಗ್‌ಗೆ ಬಂದರೆ ತೊಂದರೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ರೊಚ್ಚಿಗೆದ್ದ ಕಂಡಕ್ಟರ್ ನೀವೇನು ಪಾಕಿಸ್ತಾನದಲ್ಲಿ ಇಳಿತೀರಾ? ಎಂದು ಪ್ರಶ್ನಿಸಿ ಅವಾಂತರ ಸೃಷ್ಟಿಸಿದ್ದಾರೆ ಎನ್ನಲಾಗ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಮತ್ತೆ ಹಾಸನದಿಂದ ಕಣಕ್ಕಿಳಿತಾರಾ ದೇವೇಗೌಡರು: ಒಕ್ಕಲಿಗ ಭದ್ರಕೋಟೆಯಿಂದ ಲೋಕಸಭೆಗೆ ಸ್ಪರ್ಧೆ..?

Related Video