Asianet Suvarna News Asianet Suvarna News

ಮತ್ತೆ ಹಾಸನದಿಂದ ಕಣಕ್ಕಿಳಿತಾರಾ ದೇವೇಗೌಡರು: ಒಕ್ಕಲಿಗ ಭದ್ರಕೋಟೆಯಿಂದ ಲೋಕಸಭೆಗೆ ಸ್ಪರ್ಧೆ..?

HDD ಸ್ಪರ್ಧೆಯಿಂದ ಹಳೆ ಮೈಸೂರು ಭಾಗದಲ್ಲಿ JDSಗೆ ಬಲ?
ದೇವೇಗೌಡರ ಸ್ಪರ್ಧೆಗೆ ಹೆಚ್ಚುತ್ತಿದೆ ಕಾರ್ಯಕರ್ತರ ಒತ್ತಡ
ಗೌಡರು ಸ್ಪರ್ಧಿಸಿದ್ರೆ ಪಕ್ಷ ಬಲವರ್ಧನೆಗೊಳ್ಳುವ ನಿರೀಕ್ಷೆ

ಹಾಸನ: ಮತ್ತೆ ಹಾಸನದಿಂದ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡರು(Former Prime Minister H.D. Devegowda) ಕಣಕ್ಕಿಳಿಯಲಿದ್ದಾರೆ ಎನ್ನಲಾಗ್ತಿದೆ. ಒಕ್ಕಲಿಗ ಭದ್ರಕೋಟೆಯಿಂದ ಲೋಕಸಭೆಗೆ(Loksabhe) ಸ್ಪರ್ಧೆ ಮಾಡಬಹುದು ಎಂದು ಹೇಳಲಾಗ್ತಿದೆ. ಕಳೆದ ಬಾರಿ ಮೊಮ್ಮಗನಿಗೆ ಕ್ಷೇತ್ರವನ್ನು ಹೆಚ್‌ಡಿಡಿ ತ್ಯಾಗ ಮಾಡಿದ್ದರು. ಕಳೆದ ಬಾರಿ ತುಮಕೂರಿನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಈ ಬಾರಿ ಹಾಸನದತ್ತ(Hassan) ಮುಖಮಾಡುವ ಮೂಲಕ ಗೆಲ್ಲೋ ರಣತಂತ್ರವನ್ನು ಜೆಡಿಎಸ್ ಹೂಡಿದೆ. ಹೆಚ್‌ಡಿಡಿ ಸ್ಪರ್ಧೆಯಿಂದ ಹಳೆ ಮೈಸೂರು ಭಾಗದಲ್ಲಿ JDSಗೆ ಬಲ ಬರಬಹುದು. ಅಲ್ಲದೇ ದೇವೇಗೌಡರ ಸ್ಪರ್ಧೆಗೆ ಕಾರ್ಯಕರ್ತರ ಒತ್ತಡ ಸಹ ಹೆಚ್ಚುತ್ತಿದೆ. ಹೀಗಾಗಿ ಗೌಡರು ಸ್ಪರ್ಧಿಸಿದ್ರೆ ಪಕ್ಷ ಬಲವರ್ಧನೆಗೊಳ್ಳುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಂದು ವೇಳೆ ಗೌಡರೇ ಸ್ಪರ್ಧಿಸ್ತಾರೆ ಅಂದ್ರೆ ಪ್ರಜ್ವಲ್ ಕಣದಿಂದ ಹಿಂದೆ ಸರಿಯಬಹುದು. ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡಲ್ಲ ಎಂದು ಹೆಚ್‌ಡಿಕೆ ಈಗಾಗಲೇ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಮುಂದಾದ್ರೆ ಗೊಂದಲ ಸೃಷ್ಟಿಯಾಗಬಹುದು. 

ಇದನ್ನೂ ವೀಕ್ಷಿಸಿ:  ಜೆಡಿಎಸ್‌ಗೆ ಮತ್ತೊಂದು ಶಾಕ್‌: ತೆನೆ ಇಳಿಸಿ ‘ಕೈ’ ಹಿಡೀತಾರಾ ಬಲಿಷ್ಠ ನಾಯಕ...?

Video Top Stories