News Hour: 'ಟ್ರಂಪ್‌ ಪ್ಲೀಸ್‌ ಹೆಲ್ಪ್‌ ಮೀ..' ಸಹಾಯಕ್ಕಾಗಿ ಅಮೆರಿಕ ಎದುರು ಮಂಡಿಯೂರಿದ ಪಾಕಿಸ್ತಾನ!

ಭಾರತದೊಂದಿಗೆ ಯುದ್ಧ ಬೇಡ ಎಂದು ಪಾಕಿಸ್ತಾನ ಅಮೆರಿಕಕ್ಕೆ ಮನವಿ ಮಾಡಿದೆ. ಭಾರತ ನೀರು ನಿಲ್ಲಿಸಿ ಬೆದರಿಕೆ ಹಾಕಿದೆ ಎಂದು ಪಾಕ್ ರಾಯಭಾರಿ ಆರೋಪಿಸಿದ್ದಾರೆ. ಇನ್ನು ಸಿಖ್ ಸೈನಿಕರು ಯುದ್ಧ ಮಾಡಬಾರದು ಎಂದು ಪನ್ನು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮೇ.2): ಭಾರತದಂಥ ದೊಡ್ಡ ದೇಶದೊಂದಿಗೆ ಯುದ್ಧ ಬೇಕಾಗಿಲ್ಲ. ಯುದ್ಧವನ್ನು ತಪ್ಪಿಸುವಂತೆ ಪಾಕಿಸ್ತಾನದ ರಾಯಭಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಮನವಿ ಮಾಡಿದೆ.

ಸಹಾಯಕ್ಕಾಗಿ ಅಮೆರಿಕ ಎದುರು ಪಾಕಿಸ್ತಾನ ಮಂಡಿಯೂರಿದೆ. ಭಾರತ ಈಗಾಗಲೇ ನೀರು ನಿಲ್ಲಿಸಿ 25 ಕೋಟಿ ಜನರಿಗೆ ಮೋದಿ ಬೆದರಿಕೆ ಹಾಕಿದ್ದಾರೆ. ಟ್ರಂಪ್​ ಸಹಾಯ ಮಾಡದಿದ್ರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಎಂದು ಪಾಕ್ ರಾಯಭಾರಿ ಅಳಲು ತೋಡಿಕೊಂಡಿದ್ದಾರೆ.

ಪಾಕ್ ಮೇಲೆ ದಾಳಿ ಮಾಡಿದ್ರೆ ಭಾರತದ 7 ಈಶಾನ್ಯ ರಾಜ್ಯ ವಶಪಡಿಸುವ ಎಚ್ಚರಿಕೆ ನೀಡಿದ ಬಾಂಗ್ಲಾ

ಇನ್ನೊಂದೆಡೆ, ಭಾರತೀಯ ಸೇನೆಯಲ್ಲಿರುವ ಸಿಖ್‌ ಸೈನಿಕರು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬಾರದು ಎಂದು ಗುರುಪತ್ವಂತ್‌ ಸಿಂಗ್‌ ಪನ್ನು ಉದ್ಧಟತನ ಮೆರೆದಿದ್ದಾರೆ. ಕೆನಡಾದಿಂದ ಉಗ್ರ ಪನ್ನು ಭಾರತದ ವಿರುದ್ಧ ಕುತಂತ್ರ ಮಾಡುತ್ತಿದ್ದಾನೆ.

Related Video