ಪೆಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಮೇಲೆ ದಾಳಿ ಮಾಡಿದರೆ ಭಾರತದ 7 ಈಶಾನ್ಯ ರಾಜ್ಯ ಬಾಂಗ್ಲಾದೇಶ ವಶಪಡಿಸಿಕೊಳ್ಳಲಿದೆ ಎಂದು ಮೊಹಮ್ಮದ್ ಯೂನಸ್ ಆಪ್ತ, ಆರ್ಮಿ ಮುಖ್ಯಸ್ಥ ಎಚ್ಚರಿಸಿದ್ದಾನೆ.
ನವದೆಹಲಿ(ಮೇ.02) ಪೆಹಲ್ಗಾಂ ಉಗ್ರ ದಾಳಿಯಲ್ಲಿ ಭಾರತದ 26 ಮಂದಿ ಮೃತಪಟ್ಟಿದ್ದಾರೆ. ಈ ದಾಳಿ ನಡೆಸಿದ ಉಗ್ರರ ಪತ್ತೆ ಹಚ್ಚಿ ಸದೆಬಡಿಯುವುದಾಗಿ ಭಾರತ ಹೇಳಿದೆ. ಇದೇ ವೇಳೆ ಈ ಉಗ್ರರಿಗೆ ನೆರವು ನೀಡಿದ ಪಾಕಿಸ್ತಾನಕ್ಕೂ ಒಂದು ಗತಿ ಕಾಣಿಸಲು ಭಾರತ ತಯಾರಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶ ಭಾರತಕ್ಕೆ ಎಚ್ಚರಿಕೆ ನೀಡಿದೆ. ಬಾಂಗ್ಲಾದೇಶದ ನಿವೃತ್ತ ಮೇಜರ್ ಜನರಲ್ ಎ.ಎಲ್.ಎಂ ಫಜ್ಲುರ್ ರೆಹಮಾನ್ ಇದೀಗ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಭಾರತದ 7 ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶ ದಾಳಿ ಮಾಡಿ ಕೈವಶ ಮಾಡಲು ಬಾಂಗ್ಲಾ ಸೇನೆಗೆ ಸಲಹೆ ನೀಡಿದ್ದಾನೆ.
ಬಾಂಗ್ಲಾದೇಶದ ಹಂಗಾಮಿ ಪ್ರಧಾನಿ ಮೊಹಮ್ಮದ್ ಯೂನಸ್ ಅವರ ಪ್ರಮುಖ ಸಲಹೆಗಾರ, ಆಪ್ತ ಎಂದು ಪರಿಗಣಿಸಲ್ಪಟ್ಟಿರುವ ಬಾಂಗ್ಲಾದೇಶ ರೈಫಲ್ಸ್‌ನ (ಈಗ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ) ಮಾಜಿ ಮುಖ್ಯಸ್ಥ ರೆಹಮಾನ್, ಈ ಸಲಹೆ ನೀಡಿದ್ದಾನೆ. ಬಾಂಗ್ಲಾದೇಶ ಸೇನೆಗೆ ಈ ಸಲಹೆ ನೀಡಿದ್ದು, ಇದಕ್ಕೆ ಚೀನಾ ಜೊತೆ ಸಹಕಾರ ಪಡೆದುಕೊಳ್ಳವುಂತೆ ಸೂಚಿಸಿದ್ದಾನೆ.ಚೀನಾ ಜೊತೆ ಬಾಂಗ್ಲಾದೇಶ ಉತ್ತಮ ಸಂಬಂಧವಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ, ಭಾರತದ ವಿರುದ್ದ ಹೋರಾಡುತ್ತಿದೆ. ಹೀಗಾಗಿ ಚೀನಾ ಬಾಂಗ್ಲಾದೇಶ ಜೊತೆ ಕೈಜೋಡಿಸಲಿದೆ ಎಂದಿದ್ದಾನೆ.
ತನ್ನ ಪ್ರಜೆಗಳಿಗೆ ಗಡಿ ಮುಚ್ಚಿದ ಪಾಕ್, ಭಾರತ ಹೊರಬಿದ್ದ ಪಾಕಿಗಳು ವಾಘ ಗಡಿಯಲ್ಲಿ ಅತಂತ್ರ
“ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಬಾಂಗ್ಲಾದೇಶ ಈಶಾನ್ಯ ಭಾರತದ ಏಳು ರಾಜ್ಯಗಳನ್ನು ವಶಪಡಿಸಿಕೊಳ್ಳಬೇಕು. ಈ ವಿಷಯದಲ್ಲಿ ಚೀನಾದೊಂದಿಗೆ ಜಂಟಿ ಮಿಲಿಟರಿ ವ್ಯವಸ್ಥೆಯ ಬಗ್ಗೆ ಚರ್ಚೆ ಆರಂಭಿಸುವುದು ಅಗತ್ಯವೆಂದು ನಾನು ಭಾವಿಸುತ್ತೇನೆ” ಎಂದು ರೆಹಮಾನ್ ಹೇಳಿದ್ದಾರೆ. ಮುಹಮ್ಮದ್ ಯೂನುಸ್ ಕಳೆದ ಮಾರ್ಚ್‌ನಲ್ಲಿ ಚೀನಾ ಪ್ರವಾಸದ ಸಮಯದಲ್ಲಿ ಭಾರತದ ಈಶಾನ್ಯ ರಾಜ್ಯಗಳ ಬಗ್ಗೆ ಮಾಡಿದ ಹೇಳಿಕೆಗಳು ಉದ್ವಿಗ್ನತೆಯನ್ನು ಹೆಚ್ಚಿಸಿವೆ.
“ಭಾರತದ ಏಳು ರಾಜ್ಯಗಳು, ಭಾರತದ ಪೂರ್ವ ಭಾಗವನ್ನು ಸೆವೆನ್ ಸಿಸ್ಟರ್ಸ್ ಎಂದು ಕರೆಯಲಾಗುತ್ತದೆ. ಇವು ಭಾರತದ ಭೂಪ್ರದೇಶ ಪ್ರದೇಶ. ಅವರಿಗೆ ಸಮುದ್ರ ತಲುಪಲು ಯಾವುದೇ ಮಾರ್ಗವಿಲ್ಲ” ಎಂದು ಡಾ. ಯೂನುಸ್ ಹೇಳಿದ್ದಾರೆ. ಅವರು ಬಾಂಗ್ಲಾದೇಶವನ್ನು ಈ ಪ್ರದೇಶದಲ್ಲಿ 'ಸಾಗರದ ಏಕೈಕ ರಕ್ಷಕ' ಎಂದು ಕರೆದಿದ್ದಾರೆ ಮತ್ತು ಇದು ಚೀನಾದ ಆರ್ಥಿಕತೆಯ ವಿಸ್ತರಣೆಗೆ ಒಂದು ದೊಡ್ಡ ಅವಕಾಶವಾಗಬಹುದು ಎಂದು ಹೇಳಿದ್ದಾರೆ.
ಈ ಹೇಳಿಕೆಗಳನ್ನು ಭಾರತದ ಆಡಳಿತ ಪಕ್ಷ ಬಿಜೆಪಿಯ ಹಲವಾರು ನಾಯಕರು ಖಂಡಿಸಿದ್ದಾರೆ. ಯೂನುಸ್ ಅವರ ಈ ಹೇಳಿಕೆಯ ಕೆಲವು ದಿನಗಳ ನಂತರ, ಭಾರತವು ಬಾಂಗ್ಲಾದೇಶಿ ರಫ್ತು ಸರಕುಗಳನ್ನು ಮೂರನೇ ದೇಶಗಳಿಗೆ ಭಾರತೀಯ ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಮೂಲಕ ಸಾಗಿಸಲು ಅನುಮತಿಸುವ ಸುಮಾರು ಐದು ವರ್ಷಗಳ ಹಳೆಯ ಒಪ್ಪಂದವನ್ನು ರದ್ದುಗೊಳಿಸಿದೆ.
ಗಡಿಯಲ್ಲಿ ಹೈಟೆನ್ಷನ್: ಭಾರತ-ಪಾಕ್ ಯುದ್ಧೋನ್ಮಾದ ತೀವ್ರ, ಸಮುದ್ರದಲ್ಲಿ ಸಮರಾಭ್ಯಾಸ, ವಾಯುಸೀಮೆ ಬಂದ್!


