Prophet Row: ದೇಶಾದ್ಯಂತ ಪ್ರತಿಭಟನೆ ಹೆಸರಲ್ಲಿ ದಂಗೆ: ಕಲ್ಲು ತೂರಿ, ಬೆಂಕಿ ಹಚ್ಚಿ ನ್ಯಾಯ ಕೇಳಬೇಕಾ?

ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಹಾಗೂ ವಜಾ ಆದ ಬಿಜೆಪಿ ಮುಖಂಡ ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಬಂಧಿಸುವಂತೆ ಆಗ್ರಹಿಸಿ ದೇಶದ 8 ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ, ಹಿಂಸಾಚಾರ ಕಲ್ಲು ತೂರಾಟಗಳು ನಡೆದಿವೆ.

Share this Video
  • FB
  • Linkdin
  • Whatsapp

ನವದೆಹಲಿ (ಜೂ. 11): ಪ್ರವಾದಿ ಮೊಹಮ್ಮದ್‌ (Prophet Muhammad) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಮಾಜಿ ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಹಾಗೂ ವಜಾ ಆದ ಬಿಜೆಪಿ ಮುಖಂಡ ನವೀನ್‌ ಕುಮಾರ್‌ ಜಿಂದಾಲ್‌ ಅವರನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರದ ನಮಾಜ್‌ ಬಳಿಕ ದೇಶಾದ 8 ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ, ಹಿಂಸಾಚಾರ ಕಲ್ಲು ತೂರಾಟಗಳು ನಡೆದಿವೆ.

Add Asianetnews Kannada as a Preferred SourcegooglePreferred

ದೆಹಲಿ, ಹೈದರಾಬಾದ್‌, ಉತ್ತರಪ್ರದೇಶ, ತೆಲಂಗಾಣ, ಪ.ಬಂಗಾಳ, ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡದಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ. ಜಮ್ಮು ಕಾಶ್ಮೀರದ ಕೆಲವು ಜಿಲ್ಲೆಗಳಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಕರ್ಫ್ಯೂ ಹೇರಲಾಗಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ ಹಾಗೂ ಜಾರ್ಖಂಡ್‌ನ ರಾಂಚಿಯಲ್ಲಿ ಹಿಂಸಾಚಾರ ನಡೆದಿದೆ. ಇನ್ನು ಈ ಸಂಬಂಧ ಶುಕ್ರವಾರ ರಾಜ್ಯದಲ್ಲೂ ಕೆಲವೆಡೆ ವಿವಿಧ ಮುಸ್ಲಿಂಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇದೇವೇಳೆ ಬೆಳಗಾವಿಯಲ್ಲಿ ನೂಪುರ್‌ ಶರ್ಮಾ ಅವರ ಪ್ರತಿಕೃತಿಯನ್ನು ನಡುರಸ್ತೆಯಲ್ಲೇ ನೇತು ಹಾಕಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.

ಇದನ್ನೂ ನೋಡಿ: Rohith Chakrathirtha: ಮಕ್ಕಳ ಪಠ್ಯಪುಸ್ತಕದಲ್ಲಿ ಕೇಸರಿ ಕಲರ್​? ಪರಿಷ್ಕರಣೆ ಮಾಡಿದವರೇ ಪಶ್ನೆಗೆ ಉತ್ತರಿಸ್ತಾರೆ!

Related Video