ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?

ಡಿ.ಕೆ.ಶಿವಕುಮಾರ್ ಅವರು ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಎಂಬ ಎರಡು ಗ್ಯಾರಂಟಿ ಯೋಜನೆಗಳಿಗೆ ಪರಿಷ್ಕರಣೆ ಆರಂಭಿಸಿದ್ದಾರೆ. ಈ 'ಡಬಲ್ ಆಪರೇಷನ್' ಮೂಲಕ ಅನರ್ಹರನ್ನು ಯೋಜನೆಯಿಂದ ಹೊರಗಿಡುವ ಕಾರ್ಯ ಶುರುವಾಗಿದ್ದು, ಇದು ಸರ್ಕಾರದ ಹೊಸ ರಣತಂತ್ರವಾಗಿದೆ.

Share this Video
  • FB
  • Linkdin
  • Whatsapp

ಕಾಸು.. ಕರೆಂಟು.. ಲಕ್ಷ್ಮೀ.. ಜ್ಯೋತಿ.. ಡಬಲ್ ಆಪರೇಷನ್..! ಜರಡಿ ಬ್ರಹ್ಮಾಸ್ತ್ರ.. ಎರಡು ಟಾರ್ಗೆಟ್.. ರಣಬೇಟೆಗಾರ ಡಿಕೆ..! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​ ಏನಿದು ಮಾಸ್ಟರ್​ ಸ್ಟ್ರೋಕ್.? ಎಸ್​ಐಆರ್​ಗೆ ಕೌಂಟರ್​ ಕನಕಾಧಿಪತಿಯ ಗ್ಯಾರಂಟಿ ಗುನ್ನ..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಬಲ್ ಸರ್ಜರಿ ಮೂಲಕ ಕನಕಾಧಿಪತಿ ಡಿ.ಕೆ.ಶಿವಕುಮಾರ್ ಹೊಸ ಆಟ ಶುರು ಮಾಡಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನ ಹೊಡೆಯೋ ಭರ್ಜರಿ ಪ್ಲಾನ್ ಮಾಡಿದ್ದಾರೆ. ಹಾಗಿದ್ರೆ ಕನಕಾಧಿಪತಿಯ ಆ ಪ್ಲಾನ್ ಏನು..? ಗೃಹಲಕ್ಷ್ಮೀ ಹಾಗೂ ಗ್ಯಾರಂಟಿ ಪರಿಷ್ಕರಣೆ ಮೂಲಕ ಅವರು ಹೆಣೆದಿರುವ ರಣತಂತ್ರವೇನು.? ಡಬಲ್ ಆಪರೇಷನ್ ಮೂಲಕ ಎಸ್​ಐಆರ್​ಗೆ ಕೌಂಟರ್​ ಕೊಡಲಾಗ್ತಿದೆ ಎನ್ನುವ ಚರ್ಚೆ ಶುರುವಾಗಿರೋದು ಯಾಕೆ.?

ಗೃಹಲಕ್ಷ್ಮೀ ಯೋಜನೆಯಲ್ಲಿಯೂ ಪರಿಷ್ಕರಣೆ ನಡೆಯುತ್ತಿದೆ. ಅನರ್ಹರನ್ನ ಹಡುಕಿ ಅವರನ್ನ ಯೋಜನೆಯಿಂದ ಹೊರಗಿಡುವ ಕಾರ್ಯ ಶುರುವಾಗಿದೆ. ಹಾಗಿದ್ರೆ ಗೃಹಲಕ್ಷ್ಮಿಗೆ ಆಪರೇಷನ್ ಅಗತ್ಯವಾಗಿದ್ದು ಯಾಕೆ..? ಪುಕ್ಸಟ್ಟೆ ಹಣ ಸಿಗುತ್ತೆ ಅಂತ್ಹೇಳಿ ಅಲ್ಲಿ ಹೇಗೆಲ್ಲಾ ನಡೆದಿತ್ತು ಕಳ್ಳಾಟ..?

ಮೊದಲು ಗೃಹಲಕ್ಷ್ಮೀ.. ಈಗ ಗೃಹಜ್ಯೋತಿ.. ಎರಡು ಗ್ಯಾರಂಟಿಗಳಿಗೆ ಆಪರೇಷನ್ ಶುರು ಮಾಡಿದೆ ರಾಜ್ಯ ಸರ್ಕಾರ. ಹೀಗೆ ಪರಿಷ್ಕರಣೆ ಆರಂಭವಾಗ್ತಾ ಇದ್ಹಾಗೆ ನಾನಾ ರೀತಿಯ ಗೊಂದಲಗಳು ಸಹ ಜನರನ್ನ ಕಾಡ್ತಿದ್ದು, ಸರ್ಕಾರ ಡೋಂಟ್ ವರಿ.. ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲಲ್ಲ ಅಂತಿದೆ.

Related Video