Asianet Suvarna News Asianet Suvarna News

ದೆಹಲಿ ದಂಗೆ ಪುನಾರಾವರ್ತನೆ ತಡೆಯಲು ಇಂದು ಸೂಕ್ಷ್ಮ ಪ್ರದೇಶಗಳಲ್ಲಿ ರಸ್ತೆಗಳು ಬಂದ್

ದೆಹಲಿ ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೃಹ ಇಲಾಖೆ ಜೊತೆ ಸುದೀರ್ಘ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದಾರೆ. ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ರಸ್ತೆಗಳನ್ನು, ಮೆಟ್ರೋ ಸ್ಟೇಷನ್‌ಗಳನ್ನು ಬಂದ್ ಮಾಡಲಾಗಿದೆ. 

First Published Jan 27, 2021, 9:54 AM IST | Last Updated Jan 27, 2021, 9:57 AM IST

ನವದೆಹಲಿ (ಜ. 27): ಗಣರಾಜ್ಯೋತ್ಸವ ದಿನ ದೇಶಭಕ್ತಿ, ಏಕತೆ, ಸಾಂಸ್ಕೃತಿಕ ಸಂಗಮಗಳಿಗೆ ಸಾಕ್ಷಿಯಾಗುತ್ತಿದ್ದ ರಾಷ್ಟ್ರ ರಾಜಧಾನಿ ದೆಹಲಿ, ರಣಾಂಗಣವಾಗಿ ಮಾರ್ಪಟ್ಟಿದೆ. ಪ್ರತಿಭಟನಾಕಾರರು, ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮುರಿದು ಸಿಕ್ಕ ಸಿಕ್ಕ ರಸ್ತೆಗಳಲ್ಲಿ ನುಗ್ಗಿದ್ದಾರೆ. ದಾರಿಯುದ್ಧಕ್ಕೂ ಪೊಲೀಸರ ಜೊತೆ ಘರ್ಷಣೆ ನಡೆದಿದೆ. ಕೊನೆಗೆ ಕೆಂಪುಕೋಟೆಗೂ ಮುತ್ತಿಗೆ ಹಾಕಿದ ಉದ್ರಿಕ್ತರು ರಾಷ್ಟ್ರಧ್ವಜ ಹಾರಿಸಬೇಕಾದ ಧ್ವಜಸ್ತಂಭ ಏರಿ ಸಿಖ್ ಮತ್ತು ಇತರ ಧ್ವಜಗಳನ್ನು ಹಾರಿಸಿದರು. 

ಕೆಂಪುಕೋಟೆಯಲ್ಲಿ ಪ್ರತ್ಯೇಕ ರಾಷ್ಟ್ರ ಧ್ವಜ ಹಾರಿಸಿದ ರೈತ ಪ್ರತಿಭಟನೆ; ಪಾಕಿಸ್ತಾನದಲ್ಲಿ ಸಂಭ್ರಮ!

ಇಡೀ ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೃಹ ಇಲಾಖೆ ಜೊತೆ ಸುದೀರ್ಘ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದಾರೆ. ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ರಸ್ತೆಗಳನ್ನು, ಮೆಟ್ರೋ ಸ್ಟೇಷನ್‌ಗಳನ್ನು ಬಂದ್ ಮಾಡಲಾಗಿದೆ. ಅತೀ ಹೆಚ್ಚು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ದಂಗೆ ಮತ್ತೆ ಪುನಾರಾವರ್ತನೆ ಆಗದಂತೆ ಮುನ್ನಚ್ಚರಿಕೆ ವಹಿಸಲಾಗಿದೆ. 

Video Top Stories