ಅಂದರ್-ಬಾಹರ್ ಆಟ. ಪ್ಲಸ್-ಮೈನಸ್ ಲೆಕ್ಕಾಚಾರ..! ಪೂರ್ವದಲ್ಲಿ ಬಿಜೆಪಿಗೆ ಪ್ಲಸ್..ಪಶ್ಚಿಮದಲ್ಲಿ ಮೈನಸ್..!
ಅಂದರ್-ಬಾಹರ್ ಆಟದಲ್ಲಿ ಮತ್ತೆ ಬಿಜೆಪಿ ನಾಗಾಲೋಟ..?
ಮೈನಸ್-ಪ್ಲಸ್ ಲೆಕ್ಕಾಚಾರದಲ್ಲಿ ಗೆಲ್ಲಲಿದ್ಯಂತೆ ಕೇಸರಿ ಪಡೆ..!
ಕೆಲ ರಾಜ್ಯಗಳಲ್ಲಿ ದಿಗ್ವಿಜಯ, ಕೆಲ ರಾಜ್ಯಗಳಲ್ಲಿ ಪರಾಜಯ..!
ಮುಗಿಯಿತು ಮಹಾಭಾರತ ಮಹಾಯುದ್ಧ. ಹೊರ ಬಿತ್ತು ಚುನಾವಣೋತ್ತರ ಮಹಾ ಸಮೀಕ್ಷೆ. ಮತಗಟ್ಟೆ ಸಮೀಕ್ಷೆಗಳಲ್ಲಿ(Exit poll result) ಮತ್ತೆ ಮೋದಿ ಮೇನಿಯಾ. ಪ್ರಚಂಡ ಬಹುಮತದೊಂದಿಗೆ ಮೋದಿ(Narendra Modi) ಹ್ಯಾಟ್ರಿಕ್ ಪಟ್ಟಾಭಿಷೇಕ ಪಕ್ಕಾ ಎಂದು ಎಕ್ಸಿಟ್ ಪೋಲ್ ಹೇಳಿದೆ. ಮತ್ತೆ 350+ ಸೀಟುಗಳ ಲೆಕ್ಕ ಹೇಳಿದ ಪೋಲ್ ಆಫ್ ಎಕ್ಸಿಟ್ ಪೋಲ್ಸ್. ದೇಶದಲ್ಲಿ ಬಿಜೆಪಿಗೆ(BJP) 370 ಸ್ಥಾನ, NDAಗೆ 400ಕ್ಕೂ ಹೆಚ್ಚು ಸ್ಥಾನ. ಹೀಗಂತ ಹೇಳಿದ್ದು ಈ ದೇಶದ ಪ್ರಧಾನಿ, ಈ ದೇಶದ ಅತೀ ದೊಡ್ಡ ಮತಬೇಟೆಗಾರ ಪ್ರಧಾನಿ ನರೇಂದ್ರ ಮೋದಿ.ಕಾಂಗ್ರೆಸ್ ನಾಯಕರು, ಇಂಡಿಯಾ ಮೈತ್ರಿಕೂಟದ(India alliance) ಮುಂಚೂಣಿಯ ದಂಡನಾಯಕರೆಲ್ಲಾ ಮೋದಿ ಹೇಳಿಕೆಯನ್ನು ಲೇವಡಿ ಮಾಡಿದ್ರು. ಆದ್ರೆ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಮೂರು ದಿನ ಇರೋವಾಗ ಹೊರ ಬಿದ್ದಿರೋ ಮತಗಟ್ಟೆ ಸಮೀಕ್ಷೆಯನ್ನ ನೋಡಿದ್ರೆ, ಮೋದಿ ಅವತ್ತು ಹೇಳಿದ್ದೇ ನಿಜವಾಗುವ ಲಕ್ಷಣಗಳು ಕಾಣ್ತಾ ಇವೆ. ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಅಂತ ಕರೆಯಲಾಗುತ್ತೆ. ಭಾರತ ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ. ಇಂಥಾ ದೇಶದಲ್ಲಿ ಒಟ್ಟು 543 ಸ್ಥಾನಗಳಿಗೆ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿದ್ದು, ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಅದಕ್ಕೂ ಮುನ್ನ ಸ್ಫೋಟಗೊಂಡಿರೋ ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿಯೂ ಬಿಜೆಪಿಗೆ, ಬಿಜೆಪಿ ನೇತೃತ್ವದ ಎನ್‌ಡಿಎಗೆ ಪ್ರಚಂಡ ಜಯ ಅನ್ನೋ ಭವಿಷ್ಯ ನುಡಿದು ಬಿಟ್ಟಿವೆ.
ಇದನ್ನೂ ವೀಕ್ಷಿಸಿ: ಕಂಡಕ್ಟರ್‌ಗೆ ಬಸ್‌ನಲ್ಲಿ ಸಿಕ್ತು 3 ಲಕ್ಷ ಮೌಲ್ಯದ ಚಿನ್ನ! ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್