ಕಂಡಕ್ಟರ್‌ಗೆ ಬಸ್‌ನಲ್ಲಿ ಸಿಕ್ತು 3 ಲಕ್ಷ ಮೌಲ್ಯದ ಚಿನ್ನ! ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್
ಬಸ್‌ನಲ್ಲಿ ಮೂರು ಲಕ್ಷ ಬೆಲೆಬಾಳುವ ಒಡವೆಗಳನ್ನು ಮರೆತು ಹೋಗಿದ್ದ ಮಹಿಳೆ ಹುಡುಕಿ, ಆಕೆಗೆ ಅದನ್ನು ಚಾಲಕ ಹಾಗೂ ನಿರ್ವಾಹಕ ಹಿಂದಿರುಗಿಸಿದ್ದಾರೆ.
ತುಮಕೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ(KSRTC Bus) ಮೂರು ಲಕ್ಷ ಬೆಲೆ ಬಾಳುವ ಚಿನ್ನಾಭರಣದ ಬ್ಯಾಗ್(Gold Bag) ದೊರೆತಿದ್ದು, ಅದನ್ನು ಮಹಿಳಿಗೆ ಹಿಂತಿರುಗಿಸುವ ಮೂಲಕ ಚಾಲಕ(Driver) ಹಾಗೂ ನಿರ್ವಾಹಕ(Conducter) ಮಾದರಿಯಾಗಿದ್ದಾರೆ. ಮಹಿಳೆ ಅದೋನಿಯಿಂದ ಬಳ್ಳಾರಿಗೆ ಪ್ರಯಾಣ ಮಾಡುತ್ತಿದ್ದು, ಬಸ್‌ನಲ್ಲಿ ಮೂರು ಲಕ್ಷ ಬೆಲೆಬಾಳುವ ಒಡವೆಗಳನ್ನು ಮರೆತು ಹೋಗಿದ್ದರು. ಬಳ್ಳಾರಿ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮರೆತು ಹೋಗಿದ್ದರು. ಇದನ್ನ ಗಮನಿಸಿದ ಚಾಲಕ ಸಂತೋಷ್ ಕಣವಿ ಹಾಗೂ ನಿರ್ವಾಹಕ ಕಲ್ಲಪ್ಪ ಹನುಮಂತ್ ಕವಣಿ ಒಡವೆ ವಾಪಸ್ ನೀಡಿದ್ದಾರೆ. ಹೊಸಪೇಟೆ ಬಳ್ಳಾರಿ ಹಾಗೂ ಶಿರಾ ಡಿಪೋಗಳ ಸಹಕಾರದೊಂದಿಗೆ ಮಹಿಳೆ ಪತ್ತೆ ಮಾಡಲಾಗಿದೆ. ಶಿರಾ ಘಟಕದಲ್ಲಿದ್ದ ಒಡವೆ ವಾಪಸ್ ನೀಡಲಾಗಿದೆ. ಚಾಲಕ ಹಾಗೂ ನಿರ್ವಾಹಕರ ಈ ಕೆಲಸವನ್ನು ಸಾರ್ವಜನಿಕರು ಮೆಚ್ಚಿಕೊಂಡಿದ್ದಾರೆ.
ಇದನ್ನೂ ವೀಕ್ಷಿಸಿ: ಎಕ್ಸಿಟ್ ಪೋಲ್‌ಗೆ ವಿರುದ್ಧವಾದ ಫಲಿತಾಂಶ ಬರಲಿದ್ದು,ರಿಸಲ್ಟ್ ಬರುವವರೆಗೂ ಕಾಯೋಣ: ಸೋನಿಯಾ ಗಾಂಧಿ