India@75: ಕೊಲ್ಲುವುದಾದರೆ ನನ್ನನ್ನೇ ಕೊಲ್ಲಿ, ಬ್ರಿಟಿಷರ ಬಂದೂಕಿಗೆ ಎದೆಕೊಟ್ಟ 72 ರ ಮಾತಂಗಿಣಿ ಹಜ್ರಾ

1942, ಕ್ವಿಟ್ ಇಂಡಿಯಾ ಚಳುವಳಿ ಭುಗಿಲೆದ್ದಿದ್ದ ಸಮಯ, 6 ಸಾವಿರಕ್ಕೂ ಹೆಚ್ಚು ಜನರಿದ್ದ ಮೆರವಣಿಗೆಯ ಮುಂದಾಳತ್ವ ವಹಿಸಿದ್ದವರು ಮಾತಂಗಿಣಿ ಹಜ್ರಾ.  ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮೇದಿನಿಪುರದ ಪೊಲೀಸ್ ಠಾಣೆಯತ್ತ ಹೊರಟಿದ್ದರು.

Share this Video
  • FB
  • Linkdin
  • Whatsapp

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ (Azadi Ka Amrit Mahotsav) ಆಚರಿಸುತ್ತಿರುವ ಸಮಯದಲ್ಲಿ ಏಷ್ಯಾನೆಟ್‌ ಸುವರ್ಣನ್ಯೂಸ್, ನಮಗೆ ಸ್ವಾತಂತ್ರ್ಯ ತರಲು ಶ್ರಮಿಸಿದ ವೀರಯೋಧರನ್ನು ಸ್ಮರಿಸುತ್ತಿದೆ.

India@75: ಬ್ರಿಟಿಷರ ವಿರುದ್ಧ ಯೋಧನಂತೆ ಸಮವಸ್ತ್ರ ಧರಿಸಿ ಹೋರಾಡಿದ ಕ್ಯಾ.ಲಕ್ಷ್ಮೀ

1942, ಕ್ವಿಟ್ ಇಂಡಿಯಾ ಚಳುವಳಿ ಭುಗಿಲೆದ್ದಿದ್ದ ಸಮಯ, 6 ಸಾವಿರಕ್ಕೂ ಹೆಚ್ಚು ಜನರಿದ್ದ ಮೆರವಣಿಗೆಯ ಮುಂದಾಳತ್ವ ವಹಿಸಿದ್ದವರು ಮಾತಂಗಿಣಿ ಹಜ್ರಾ (Matanjini Hajra). ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮೇದಿನಿಪುರದ ಪೊಲೀಸ್ ಠಾಣೆಯತ್ತ ಹೊರಟಿದ್ದರು. ಆಗ ತಾಮ್ಲುಕ್ ಪ್ರದೇಶವನ್ನು ಸ್ವಾತಂತ್ರ್ಯ ಪ್ರಾಂತ್ಯ ಎಂದು ರಾಷ್ಟ್ರವಾದಿಗಳು ಘೋಷಿಸಿದ್ದರು. ಮೆರವಣಿಗೆ ಮುಂದುವರೆದ ಹಾಗೆ ಜನರ ಗುಂಪು ಚದುರಲು ಬ್ರಿಟಿಷ್ ಪೊಲೀಸ್ ಅಧಿಕಾರಿ ಆಜ್ಞೆ ಮಾಡುತ್ತಾರೆ. ಅದನ್ನು ನಿರ್ಲಕ್ಷಿಸಿ ಮೆರವಣಿಗೆ ಮುಂದೆ ಸಾಗುತ್ತದೆ. ಕೊಲ್ಲುವುದಿದ್ದರೆ ನನ್ನನ್ನೇ ಕೊಲ್ಲಿ ಎಂದು ಮಾತಂಗಿಣಿ ಪೊಲೀಸರ ಎದುರು ನಿಲ್ಲುತ್ತಾರೆ. ಪೊಲೀಸರ ಗುಂಡು ಮಾತಂಗಿಣಿಯ ಎದೆ ಸೀಳುತ್ತದೆ. ಮಾತಂಗಿಣಿಯ ಬಲಿದಾನ ಸದಾ ಸ್ಮರಣೀಯ. 

Related Video