75ನೇ ವರ್ಷದ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು 'ಆಜಾದಿ ಕಾ ಅಮೃತ್ ಮಹೋತ್ಸವ' ಎಂದು ಆಚರಿಸಲು ಕೇಂದ್ರ ಸರಕಾರ ಕರೆ ನೀಡಿದೆ. ಇದರ ಭಾಗವಾಗಿ ಭಾರತೀಯ ನೌಕಾಪಡೆಯು ದೇಶದ 75 ದ್ವೀಪಗಳಲ್ಲಿ ಧ್ವಜಾರೋಹಣ ನಡೆಸುತ್ತಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಿಂದ ಅನತಿ ದೂರದಲ್ಲಿರುವ ಅಂಜುದೀವ್ ದ್ವೀಪದಲ್ಲಿ ಕೂಡಾ ನೌಕಾನೆಲೆಯ ಅಧಿಕಾರಿಗಳ ನೇತೃತ್ವದಲ್ಲಿ ಸಂಭ್ರಮದ ಧ್ವಜಾರೋಹಣ ನಡೆದಿದ್ದು, ನಿರ್ಬಂಧಿತ ದ್ವೀಪದಲ್ಲಿ ಸ್ವಾತಂತ್ರ್ಯದ ಸಂಭ್ರಮ ಕಾಣಿಸಿಕೊಂಡದ್ದು ವಿಶೇಷವಾಗಿತ್ತು. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.