Asianet Suvarna News Asianet Suvarna News

ಎಲ್ಲಾ ಜಿಲ್ಲೆಗಳಿಗೂ ಜಯದೇವ ಆಸ್ಪತ್ರೆ ? ಡಾ. ಸಿ.ಎನ್‌. ಮಂಜುನಾಥ್ ಐಡಿಯಾ ಇದು!

ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಸಮೀಪ ಸೂಕ್ತವಾದ ಆಸ್ಪತ್ರೆಯಿಲ್ಲದಿದ್ದರೆ ವ್ಯಕ್ತಿಯ ಜೀವಕ್ಕೇ ಸಂಚಕಾರ ಬರುತ್ತದೆ. ಹೀಗಾಗಿ ಮೆಡಿಕಲ್ ಕಾಲೇಜುಗಳು ಸ್ವಂತ ನಿರ್ವಹಣೆ ಮಾಡಬಹುದಾದ ಸಣ್ಣ ಸಣ್ಣ ಘಟಕಗಳನ್ನು ತೆರೆಯಬೇಕು ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೇರೆ ಬೇರೆ ಜಿಲ್ಲೆಗಳಲ್ಲಿ ಜಯದೇವ ಘಟಕಗಳನ್ನು ಆರಂಭಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಎಲ್ಲಾ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜಿದೆ. ಹೀಗಾಗಿ ಈ ಮೆಡಿಕಲ್ ಕಾಲೇಜುಗಳು ಸ್ವಂತ ನಿರ್ವಹಣೆ ಮಾಡಬಹುದಾದ ಸಣ್ಣ ಸಣ್ಣ ಘಟಕಗಳನ್ನು ತೆರೆಯಬೇಕು. ಆಗ ಜಯದಏವ ಆಸ್ಪತ್ರೆಯ ಮೇಲಿನ ಒತ್ತಡ ಕಡಮೆಯಾಗುತ್ತೆ ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಮಾತ್ರವಲ್ಲ ಅವರಿಗೆ ಅಗತ್ಯವಿರುವ ತಾಂತ್ರಿಕ ತರಬೇತಿ, ಸಲಹೆಗಳನ್ನು ಕೊಡಬಹುದು ಎಂದು ತಿಳಿಸಿದ್ದಾರೆ. 

ಆಸ್ಪತ್ರೆಯಲ್ಲಿ ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವವಿದೆ: ಡಾ. ಸಿ.ಎನ್. ಮಂಜುನಾಥ್