ಆಸ್ಪತ್ರೆಯಲ್ಲಿ ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವವಿದೆ: ಡಾ. ಸಿ.ಎನ್. ಮಂಜುನಾಥ್
ಒಂದು ಆಸ್ಪತ್ರೆ ಚೆನ್ನಾಗಿ ನಡಿಯುವಾಗ, ಆಸ್ಪತ್ರೆ ಬಗ್ಗೆ ಜನರಲ್ಲಿ ವಿಶ್ವಾಸ ಬರುವುದು ಬಹಳ ಮುಖ್ಯ ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.
ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವವರು ಒಂದು ಕುಟುಂಬದ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು. ಕೇವಲ ಕಟ್ಟಡಗಳಿಂದ ಒಳ್ಳೆಯ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ. ಸಿಬ್ಬಂದಿ ವರ್ಗದಲ್ಲಿ ಸೇವಾ ಮನೋಭಾವವನ್ನು ಹುಟ್ಟು ಹಾಕಬೇಕು. ಜಯದೇವ ಆಸ್ಪತ್ರೆಯಲ್ಲಿ ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವವಿದೆ. ಇದು ನಮ್ಮ ಮನೆ ಸ್ವಂತ ಆಸ್ಪತ್ರೆ ಎನ್ನುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡುವ ವಾತಾವರಣ, ನಾಯಕತ್ವವನ್ನು ಕೊಟ್ಟಿದ್ದೇವೆ ಎಂದರು. ಸರ್ಕಾರ ಕೂಡ ನಮಗೆ ತುಂಬಾ ಸಹಕಾರ ಕೊಡುತ್ತಿದೆ. ನನಗೆ ಸರ್ಕಾರಿ ಆಸ್ಪತ್ರೆಯನ್ನು ಪಂಚತಾರ ಖಾಸಗಿ ಆಸ್ಪತ್ರೆ ಮಟ್ಟಕ್ಕೆ ನಿರ್ಮಾಣ ಮಡಬೇಕು. ಈ ರಾಜ್ಯಕ್ಕೆ, ಜಗತ್ತಿಗೆ ತೋರಿಸಬೇಕು ಎಂದು ಕನಸು ಇತ್ತು. ಅದರಲ್ಲಿ ಸಂಪೂರ್ಣ ಯಶಸ್ಸನ್ನು ಕಂಡಿದ್ದೇವೆ ಎಂದು ಹೇಳಿದರು.
ರೋಗಿಗಳು ತುರ್ತು ಚಿಕಿತ್ಸೆಗೆ ಬಂದಾಗ ಹಣ ನೋಡಲ್ಲ, ಜೀವ ಉಳಿಸೋದು ಮುಖ್ಯ; ಡಾ.ಸಿ.ಎನ್.ಮಂಜುನಾಥ್