ರಾತ್ರಿ ಲೇಟಾಗಿ ಮಲಗೋ ಅಭ್ಯಾಸವಿದ್ಯಾ? ಇದ್ರಿಂದ ಕಣ್ಣಿಗೇನಾಗುತ್ತೆ ತಿಳ್ಕೊಳ್ಳಿ
ಆರೋಗ್ಯವಾಗಿರಬೇಕಾದರೆ ಸಮರ್ಪಕ ರೀತಿಯಲ್ಲಿ ಆಹಾರ ತಿನ್ನುವುದರ ಜೊತೆಗೆ ಸರಿಯಾಗಿ ನಿದ್ದೆ ಮಾಡುವುದು ಸಹ ತುಂಬಾ ಮುಖ್ಯ. ಹಾಗೆಯೇ ಮಲಗುವ ಸಮಯ ಸಹ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೇತ್ರ ತಜ್ಞ ಡಾ.ಪ್ರಿಯಾಂಕ್ ಸೋಲಂಕಿ ಈ ಬಗ್ಗೆ ಏನ್ ಹೇಳ್ತಾರೆ ತಿಳಿಯೋಣ.
ಸಾಕಷ್ಟು ನಿದ್ರೆ ಮಾಡುವುದು ಆರೋಗ್ಯಕ್ಕೆ ಮುಖ್ಯವಾಗಿದೆ. ಏಕೆಂದರೆ ನಿದ್ದೆಯು ನಮ್ಮ ಆಯಾಸವನ್ನು ನಿವಾರಿಸುತ್ತದೆ ಮತ್ತು ದೇಹವು ಉಲ್ಲಾಸದಿಂದ ಇರುವಂತೆ ಮಾಡುತ್ತದೆ. ಹಾಗೆಯೇ ಯಾವ ಸಮಯಕ್ಕೆ ಏಳಬೇಕು, ಯಾವ ಸಮಯಕ್ಕೆ ಮಲಗಬೇಕು ಎಂಬುದನ್ನು ಸಹ ತಿಳಿದುಕೊಂಡಿರುವುದು ಮುಖ್ಯವಾಗುತ್ತದೆ. ನಿದ್ದೆಯ ಕುರಿತು ಸಮಯ ಪಾಲನೆ ತುಂಬಾ ಮುಖ್ಯ. ಇದನ್ನು ನಿರ್ಲಕ್ಷಿಸುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲೂ ರಾತ್ರಿ ತಡವಾಗಿ ಮಲಗುವುದು ಕಣ್ಣಿಗೆ ತುಂಬಾ ಎಫೆಕ್ಟ್ ಅಂತಾರೆ ನೇತ್ರ ತಜ್ಞ ಡಾ.ಪ್ರಿಯಾಂಕ್ ಸೋಲಂಕಿ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Digital Eye Strain: ಕಣ್ಣುಗಳನ್ನು ರಕ್ಷಿಸಲು ಇಲ್ಲಿವೆ ಸಿಂಪಲ್ ಟಿಪ್ಸ್