
ಡೆವಿಲ್ in ಟ್ರಬಲ್! ಕೊಲೆ ಆರೋಪಿಗಿಲ್ಲ ಪ್ರವೇಶ! ದಾಸನಿಗೆ ಬರಬೇಡ ಅಂದಿದ್ಯಾವ ದೇಶ?
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ-2 ಆಗಿರೋ ದರ್ಶನ್ , ತಮ್ಮ ದಿ ಡೆವಿಲ್ ಸಿನಿಮಾದ ಶೂಟ್ಗೆ ವಿದೇಶಕ್ಕೆ ಹೋಗಬೇಕು ಅಂತ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ರು. ಕಳೆದ ಮೇ.30ರಂದೇ ಕೋರ್ಟ್ ಅನುಮತಿ ಕೊಟ್ಟಿದೆ. ಆದ್ರೆ ಈಗಲೂ ದರ್ಶನ್ ವಿದೇಶಕ್ಕೆ ಹಾರಿಲ್ಲವೇಕೆ.. ಅದರ ಹಿಂದೆ ಒಂದು ಬಲವಾದ ಕಾರಣ ಇದೆ..?
ಕೋರ್ಟ್ ಅನುಮತಿ ಕೊಟ್ರೂ ವಿದೇಶಕ್ಕೆ ಹಾರಿಲ್ಲವೇಕೆ ದಾಸ..? ಯೆಸ್ ದರ್ಶನ್ ವಿದೇಶದಲ್ಲಿ ಶೂಟಿಂಗ್ ಮಾಡ್ಲಿಕ್ಕೆ ಅನುಮತಿ ಕೊಡಿ ಅಂತ ಕೋರ್ಟ್ ಮೊರೆ ಹೋಗಿದ್ರು. ದಿ ಡೆವಿಲ್ ಸಿನಿಮಾದ ಸಾಂಗ್ ಶೂಟ್ಗೆ ಹೋಗಬೇಕು ಅನುಮತಿ ಕೊಡಿ ಅಂತ ಅರ್ಜಿ ಸಲ್ಲಿಸಿದ್ರು. ದರ್ಶನ್ ಕೊಲೆ ಆರೋಪಿ ಆಗಿರೋದ್ರಿಂದ ಅನುಮತಿ ಕೊಡಬೇಡಿ ಅಂತ ಪ್ರಾಸಿಕ್ಯೂಶನ್ ವಾದ ಮಾಡಿತ್ತು. ಈ ಬಗ್ಗೆ ವಾದ ಪ್ರತಿವಾದ ಆಲಿಸಿದ ಕೋರ್ಟ್ ಕಳೆದ ಮೇ.30ರಂದೇ ತೀರ್ಪು ಕೊಟ್ಟಿದೆ. ಜೂನ್ 1 ರಿಂದ 25ರ ವರೆಗೂ ದರ್ಶನ್ ವಿದೇಶಕ್ಕೆ ಹೋಗಬಹುದು ಅಂತ ಕೋರ್ಟ್ ಆದೇಶ ನೀಡಿತ್ತು.