Textbook Row; ಪಠ್ಯ ವಾಪಸ್ಸು ಪಡೆಯಲು ಪತ್ರ ಬರೆದವರ ವಿರುದ್ಧ Pratap Simha ವಾಗ್ದಾಳಿ

15 ವರ್ಷದಿಂದ ಇವರ ಸಾಹಿತ್ಯ ಕೃಷಿ ನಿಂತು ಹೋಗಿದೆ ಎಂದು ಬರಗೂರು ರಾಮಚಂದ್ರಪ್ಪಗೆ  ಟಾಂಗ್ ಕೊಟ್ಟಿದ್ದು,   ಅವರೆಲ್ಲಾ ಅದ್ಬುತ ಸಾಹಿತಿಗಳು ಅಂದುಕೊಳ್ಳುವುದು ಬೇಡ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಹೇಳಿಕೆ ನೀಡಿದ್ದಾರೆ.

First Published Jun 1, 2022, 4:33 PM IST | Last Updated Jun 1, 2022, 4:33 PM IST

ಮೈಸೂರು (ಜೂ.1): ಕುವೆಂಪು (kuvempu) ಅವರಿಗೆ ಅತಿ ಹೆಚ್ಚು ಗೌರವ ಕೊಟ್ಟು, ಕುವೆಂಪು ರಚಿಸಿದ ಜಯ ಭಾರತ ಜನನಿಯ ತನುಜಾತೆ ನಾಡಗೀತೆ ಮಾಡಿದ್ದು, ಅವರೆ ರಚಿಸಿದ 'ನೇಗಿಲ ಯೋಗಿಯ  ಪದ್ಯವನ್ನು ರೈತಗೀತೆ ಆಗಿ ಮಾಡಿದ್ದು ಸದಾನಂದ ಗೌಡರ ನೇತೃತ್ವದ ಬಿಜೆಪಿ ಸರ್ಕಾರ. ಮೋದಿ ಅಧಿಕಾರಕ್ಕೆ ಬಂದಾಗ ಪ್ರಶಸ್ತಿ ವಾಪಸ್ಸು ನೀಡಿದರು. ಇದೀಗ ಪಠ್ಯದ ಲೇಖನ ವಾಪಸ್ಸಿಗೆ ಪತ್ರ ಬರೆಯುತ್ತಿದ್ದಾರೆ. ಇದು ಕಾಂಗ್ರೆಸ್ ಅವರಿಂದ ಉಪಕೃತರಾದವರ ಕೆಲವರ ನಾಟಕ. ಕೆಲವರು ಕೈ ಬಿಟ್ಟ ಮೇಲೆ ನಮ್ಮ ಪಠ್ಯ ಕೈ ಬಿಡಿ ಅಂತಿದ್ದಾರೆ. ದೇವನೂರು ಅವರ ಪಠ್ಯವನ್ನು ಹಿಂದೆ ಯುವಕರು ತುಂಬಾ ಓದಿದ್ದಾರೆ. ಎಂದು ಪಠ್ಯ ವಾಪಸ್ಸು ಪಡೆಯಲು ಪತ್ರ ಬರೆದವರ ವಿರುದ್ಧ ಪ್ರತಾಪಸಿಂಹ (Pratap Simha) ವಾಗ್ದಾಳಿ ನಡೆಸಿದ್ದಾರೆ.

Textbooks Row; ಸಚಿವರ ವರದಿ ಆಧರಿಸಿ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಎಂದ ಸಿಎಂ

15 ವರ್ಷದಿಂದ ಇವರ ಸಾಹಿತ್ಯ ಕೃಷಿ ನಿಂತು ಹೋಗಿದೆ ಎಂದು ಬರಗೂರು ರಾಮಚಂದ್ರಪ್ಪಗೆ ಪ್ರತಾಸಿಂಹ ಟಾಂಗ್ ಕೊಟ್ಟಿದ್ದು,  ಕಾಂಗ್ರೆಸ್ ಪರ ನಿಲ್ಲಲು ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ. ಅವರೆಲ್ಲಾ ಅದ್ಬುತ ಸಾಹಿತಿಗಳು (litterateurs) ಅಂದುಕೊಳ್ಳುವುದು ಬೇಡ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಹೇಳಿಕೆ ನೀಡಿದ್ದಾರೆ.