Today Horoscope: ಇಂದು ಕಾರ್ತಿಕ ಪೌರ್ಣಮಿ ಇದ್ದು, ಮನಸ್ಸಿನ ನಿರಾಳತೆಗೆ ಚಂದ್ರ ದರ್ಶನ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಸೋಮವಾರ, ಪೌರ್ಣಮಿ ತಿಥಿ, ಕೃತ್ತಿಕಾ ನಕ್ಷತ್ರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ಕಾರ್ತಿಕ ಮಾಸದ ಪೌರ್ಣಮಿ ಇದ್ದು, ಇದು ತುಂಬಾ ವಿಶಿಷ್ಟವಾದ ದಿನವಾಗಿದೆ. ಇಂದು ಚಂದ್ರ ದರ್ಶನ ಮಾಡಿ. ಇದರಿಂದ ಮನಸ್ಸಿಗೆ ಸಮಾಧಾನ ಸಿಗುತ್ತದೆ. ಇಂದು ಚಂದ್ರ ಜಯಂತಿ ಸಹ ಇದೆ. ಸಿಂಹ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಅನುಕೂಲವಿದ್ದು, ಹಾಲು-ಹೈನುಗಾರರಿಗೆ ಲಾಭವಿದೆ. ಸ್ತ್ರೀಯರಿಗೆ ಮಾನ್ಯತೆ ದೊರೆಯಲಿದೆ. ಮನಸ್ತಾಪಗಳಿಂದ ಬೇಸರ ಉಂಟಾಗಲಿದೆ. ಇಂದು ಈ ರಾಶಿಯವರು ನಾಗ ದೇವರ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ: ಮೊದಲ ಭಾರಿಗೆ ತಲೆ ಎತ್ತಿ ನಿಂತ ವಜ್ರಮುನಿ ಕಂಚಿನ ಪುತ್ಥಳಿ!

Related Video