ಮೊದಲ ಭಾರಿಗೆ ತಲೆ ಎತ್ತಿ ನಿಂತ ವಜ್ರಮುನಿ ಕಂಚಿನ ಪುತ್ಥಳಿ!

ವಜ್ರಮುನಿ.. ಈ ಹೆಸ್ರು ಕೇಳಿದ್ರೆ ಒಂದ್ ಕಾಲದಲ್ಲಿ ಹೆಂಗಳೆಯರು ಮಕ್ಕಳು ಭಯ ಪಡುತ್ತಿದ್ರು. ಇವರ ವಾಯ್ಸ್ ಕೇಳಿದ್ರೇನೆ ಬೆವತು ಬಿಡ್ತಿದ್ರು. ಯಾಕಂದ್ರೆ ಅಂತಹ ಕೃರತ್ವದ ಪಾತ್ರಗಳನ್ನ ಮಾಡಿ ತೆರೆ ಮೇಲೆ ಮೆರೆದವರು ವಜ್ರಮುನಿ. ಕಂಚಿನ ಕಂಠ, ತೀಕ್ಷ್ಣ ನೋಟ, ತಮ್ಮ ನಟನೆಯಿಂದಲೇ ನಟಭಯಂಕರ ಎಂಬ ಬಿರುದ್ದು ಪಡೆದವರು ವಜ್ರಮುನಿ.

First Published Nov 27, 2023, 9:59 AM IST | Last Updated Nov 27, 2023, 9:59 AM IST


ಸ್ಯಾಂಡಲ್‌ವುಡ್‌ನಲ್ಲಿ ಹೀರೋಗಳನ್ನ ಯಾವಾಗ್ಲೂ ಮೆಚ್ಚಿ ಮೆರೆಸಿ ಆರಾಧಿಸಲಾಗುತ್ತೆ. ನಾಯಕಿಯರ ನೆನಪು ಮಾಡಿಕೊಳ್ತಾರೆ. ಆದ್ರೆ ನಾಯಕ ಪಾತ್ರಕ್ಕೆ ಸರಿಸಾಟಿಯಾಗಿ ನಿಲ್ಲೋ ಖಳನಾಯಕರನ್ನೂ ನಾವು ಸ್ಮರಿಸೋದೆ ಇಲ್ಲ. ಆದ್ರೆ ಈಗ ಅಣ್ಣಾವ್ರ ಕಾಲದ ಅದ್ಭುತ, ಅಮೋಘ, ನಟ ಭಯಂಕರ ವಜ್ರಮುನಿ(Vajramuni) ಅವರ ನೆನೆಪಲ್ಲಿ ಫಸ್ಟ್ ದಿ ಫಸ್ಟ್ ಟೈಂ ಕಂಚಿನ ಪ್ರತಿಮೆ ತಲೆ ಎತ್ತಿ ನಿಂತಿದೆ. ಬೆಂಗಳೂರಿನ(bengaluru) ನಾಗರಭಾವಿಯಲ್ಲಿ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್( Shivaraj Kumar) ವಜ್ರಮುನಿ ಕಂಚಿನ ಪುತ್ಥಳಿಯನ್ನ(Bronze statue) ಅನಾವರಣ ಮಾಡಿದ್ದಾರೆ. ವಜ್ರಮುನಿ. ನಟ ಭೈರವ, ನಟ ಭಯಂಕರ ಅಂತ  ವಜ್ರಮುನಿಗೆ ಬಿಟ್ರೆ ಇನ್ಯಾವ ನಟನಿಗೂ ಕರೆಯೋಕೆ ಆಗುತ್ತೆ ಹೇಳಿ. ತೆರೆ ಮೇಲೆ ಅವರ ರೋಷಾವೇಶ, ಪ್ರಚಂಡ ಅಭಿನಯ, ರಭಸವಾದ ಸಂಭಾಷಣೆಗೆ ಮಾರು ಹೋಗದವರೇ ಇಲ್ಲ ಕೆಂಗಣ್ಣಿನ ಮುಖದ ಕ್ರೂರನೋಟಗಳಲ್ಲಿ ತಮ್ಮನ್ನು ತಾವೇ ಮೀರಿಸುವಂತಿದ್ದ ಅಪ್ರತಿಮ ಕಲಾವಿದ ವಜ್ರಮುನಿ. ಕಲಾವಿದರಿಗೆ ಸಾವಿಲ್ಲ. ಅವರು ತಮ್ಮ ಪಾತ್ರಗಳಿಂದ ಯಾವಾಗ್ಲು ನಮ್ಮಗಳ ಮಧ್ಯೆ ಇದ್ದೇ ಇರ್ತಾರೆ. ಹಾಗೆ ಇಂದಿಗೂ ವಜ್ರಮುನಿ ವಿಜೃಂಭಿಸುತ್ತಾರೆ ಅಂದ್ರೆ ಅದಕ್ಕೆ ಕಾರಣ ಅವರು ಮಾಡಿದ್ದ ಖಳನಟನ ಪಾತ್ರಗಳು. ಸಂಪತ್ತಿಗೆ ಸವಾಲ್ ಚಿತ್ರದ ಸಾಹುಕಾರನ ಪಾತ್ರವಿರಲಿ, ಬದುಕು ಬಂಗಾರವಾಯ್ತು ಚಿತ್ರದ ಒಕ್ಕಣ್ಣ ಗೌಡನಾಗಲಿ, ಮಯೂರದ ಚಾರಿತ್ರಿಕ ಪಾತ್ರವಿರಲಿ, ಕಳ್ಳ ಕುಳ್ಳ, ದಾರಿ ತಪ್ಪಿದ ಮಗ, ಶಂಕರ್ ಗುರು ಅಂತಹ ಡಾನ್ ಪಾತ್ರಗಳಾಗಲಿ ವಜ್ರಮುನಿಯವರಿಗೆ ಲೀಲಾಜಾಲವಾಗಿತ್ತು.

ಇದನ್ನೂ ವೀಕ್ಷಿಸಿ:  ಅಭಿಮಾನಿ ಮದುವೆಯಲ್ಲಿ ರಿಯಲ್ ಸ್ಟಾರ್..! ಅಭಿಮಾನಿಗಳನ್ನ ಎಷ್ಟು ಪ್ರೀತಿಸ್ತಾರೆ ನೋಡಿ ಉಪ್ಪಿ!