ಅವಳು ಹಿಂದೂ, ಅವನು ಮುಸ್ಲಿಂ..ಅವರನ್ನ ಒಂದು ಮಾಡಿದ್ದು ನಶೆ: ಆವತ್ತು ಆ ರೂಮಿನಲ್ಲಿ ನಡೆದಿದ್ದೇನು..?

ಇಬ್ಬರು ಯೋಧರ ನಡುವೆ ಮಾರಾಮಾರಿ..!
ಒಬ್ಬರು ಆಸ್ಪತ್ರೆಗೆ ಮತ್ತೊಬ್ಬರು ಮಸಣಕ್ಕೆ..?
ಅವರಿಬ್ಬರ ನಡುವೆ ಆವತ್ತು ನಡೆದಿದ್ದೇನು..?

Share this Video
  • FB
  • Linkdin
  • Whatsapp

ಆಕೆ ಉದ್ಯೋಗ ಅರಿಸಿಕೊಂಡು ಸಿಲಿಕಾನ್ ಸಿಟಿಗೆ ಬಂದಿದ್ದ ಲೇಡಿ. 8 ವರ್ಷದ ಮಗಳು ಕೂಡ ಇದ್ದಾಳೆ. ಗಂಡ ಇವಳ ಸಹವಾಸವೇ ಬೇಡ ಅಂತ ಬಿಟ್ಟು ಹೋಗಿದ್ದಾನೆ. ಆಕೆ ಸುತ್ತಾಡದ ಏರಿಯಾ ಇಲ್ಲ ಮಾಡದ ಕೆಲಸವೇ ಇಲ್ಲ. ಹೀಗೆ ಸುತ್ತಾಡುವಾಗ ಓರ್ವ ಯುವಕನ ಪರಿಚಯವಾಗಿದೆ. ಇಬ್ಬರ ನಡುವೆ ಆತ್ಮೀಯ ಸಲುಗೆ ಬೆಳೆದು ಲಿವಿಂಗ್ ಟು ಗೆದರ್ ರಿಲೇಷನ್ ಮುಂದುವರೆಸಿದ್ದಾರೆ. ಹೀಗೆ ಮೂರು ವರ್ಷಗಳ ಪ್ರೀತಿ ಪ್ರಣಯದಾಟ ಕೊನೆಗೆ ಪ್ರಿಯತಮನ(lover) ಕೊಲೆಯಲ್ಲಿ(Murder) ಅಂತ್ಯವಾಗಿದೆ. ರೇಣುಕಾ ಜಾವೆದ್ನ ಹೆಣ ಹಾಕಿಬಿಟ್ಟಿದ್ಲು. ಲಿವಿಂಗ್ ಟು ಗೆದರ್ ರಿಲೇಷನ್ಮೂರು ವರ್ಷದ ಪ್ರೀತಿ ಈ ಮೂಲಕ ದಿ ಎಂಡ್ ಆಗಿತ್ತು. ಆದ್ರೆ ರೇಣುಕಾ ಯಾಕೆ ಹೀಗೆ ಮಾಡಿದ್ಲು ಅಂತ ನೋಡಿದ್ರೆ ಹೊರಗೆ ಬಂದಿದ್ದು ಒಂದು ನಶೆಯ ಕಥೆ. ಜೊತೆಗೆ ಜಾವೆದ್‌ಗೆ ಅಂಟಿಕೊಂಡಿದ್ದ ಅನುಮಾನ ಭೂತ. ಒಂದೇ ಮನೆಯಲ್ಲಿ ಇದ್ದ ಇವರಿಬ್ಬರ ಮಧ್ಯೆ ಅನುಮಾನ ಅನ್ನೋ ಭೂತ ಎಂಟ್ರಿ ಕೊಟ್ಟಿತ್ತು. ಅದೇ ಅನುಮಾನ ಪ್ರೀಯಕರನನ್ನೇ ಮುಗಿಸುವಂತೆ ಮಾಡಿತ್ತು. ಗಾಂಜಾ ನಶೆ ಒಂದು ಹೆಣ್ಣಿನ ಕೈಯಲ್ಲಿ ಏನೆಲ್ಲಾ ಮಾಡಿಸಿತು ಅಂತ.

ಇದು ಒಂದು ಸ್ಟೋರಿ ಆದ್ರೆ, ಮತ್ತೊಂದು ಘಟನೆಯಲ್ಲಿ ದೇಶ ಕಾದು ಬಂದ ಇಬ್ಬರು ಯೋಧರು(Soliders) ಚಾಕುವಿನಲ್ಲಿ ಹಲ್ಲೆ(Attack) ಮಾಡಿಕೊಂಡು ಒಬ್ಬರು ಮಸಣ ಸೇರಿದ್ದಾರೆ. ಮತ್ತೊಬ್ಬ ಆಸ್ಪತ್ರೆ ಸೇರಿದ್ದಾರೆ. ಅವರಿಬ್ಬರು ಉತ್ತರಕನ್ನಡ(Uttarakannada) ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕಾಲೋನಿ ನಿವಾಸಿಗಳು. ವರ್ಷಗಳ ಅವರಿಬ್ಬರ ನಡುವೆ ಇದ್ದ ಕಾಣದ ಜಗಳ ಆವತ್ತು ರಾತ್ರಿ ಯಾವುದೋ ಕಾರಣಕ್ಕೆ ತಾರಕ್ಕಕ್ಕೇರಿತ್ತು. ಇಬ್ಬರೂ ಒಬ್ಬರಿಗೊಬ್ಬರು ಯರ್ರಾಬಿರ್ರಿ ಚಾಕು ಹಾಕಿಕೊಂಡು ಇರಿದ ಪರಿಣಾಮ ಓರ್ವಂತೂ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಇದನ್ನೂ ವೀಕ್ಷಿಸಿ:  ಡಿಕೆ ಸಹೋದರರಿಗೆ ಕಾದಿದ್ಯಾ "ಕಮಲದಳ" ಮೈತ್ರಿ ತೂಫಾನ್ ಶಾಕ್..?

Related Video