ಡಿಕೆ ಸಹೋದರರಿಗೆ ಕಾದಿದ್ಯಾ "ಕಮಲದಳ" ಮೈತ್ರಿ ತೂಫಾನ್ ಶಾಕ್..?

ಮಂಡ್ಯ ರಣಕ್ಷೇತ್ರ..ರಾಮನಗರ ಕುರುಕ್ಷೇತ್ರ..ದೋಸ್ತಿ-ಕುಸ್ತಿ..!
ಬೇಟೆಗಾರ ಬಿಜೆಪಿ..ಟಾರ್ಗೆಟ್ ಡಿಕೆ..!ಸುಮಲತಾ ಕಥೆ ಏನು..?
“ಕಮಲದಳ” ಮೈತ್ರಿಗೆ ಉರುಳುತ್ತಾ ಕಾಂಗ್ರೆಸ್‌ ಭದ್ರಕೋಟೆ..?

First Published Sep 12, 2023, 2:23 PM IST | Last Updated Sep 12, 2023, 2:23 PM IST

ರಾಜಕಾರಣ ಅಂದ್ರೇನೇ ಹಾಗೆ.. ಅದೊಂಥರಾ ರಹಸ್ಯಗಳ ಕೋಟೆ. ಅಲ್ಲಿ ಯಾವಾಗ ಏನಾಗುತ್ತೋ, ಯಾರು ಯಾರ ಜೊತೆ ಕೈ ಜೋಡಿಸ್ತಾರೋ ಅನ್ನೋದೇ ಗೊತ್ತಾಗಲ್ಲ. ಇಲ್ಲಿ ಆಜನ್ಮ ವೈರಿಗಳು ಒಂದಾಗ್ತಾರೆ, ಒಂದಾಗಿದ್ದವರು ಆಜನ್ಮ ಶತ್ರುಗಳಾಗ್ತಾರೆ. ಅದೇ ರಾಜಕೀಯ. ಲೋಕಸಭಾ(Loksabha) ಚುನಾವಣೆ ಹತ್ತಿರ ಬರ್ತಾ ಇದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್‌ನನ್ನು(Congress) ಬಗ್ಗು ಬಡಿಯಲು ಬಿಜೆಪಿ(BJP) ಮತ್ತು ಜೆಡಿಎಸ್ (JDS) ಒಂದಾಗೋ ಲಕ್ಷಣ ಕಾಣಿಸ್ತಾ ಇದೆ. ಕೂಡಿ ಕಳೆಯೋ ಆಟದಲ್ಲೀಗ ನಿಜವಾದ ಸವಾಲು ಎದುರಾಗಿರೋದು ಕನಕಪುರ ಬಂಡೆ ಡಿಕೆ ಶಿವಕುಮಾರ್ ಅವ್ರಿಗೆ. ಡಿಕೆಶಿ ಅವ್ರನ್ನು ರಾಜ್ಯ ರಾಜಕಾರಣದಲ್ಲಿ ರಣಬೇಟೆಗಾರ ಅಂತ ಕರೀತಾರೆ. ಅದನ್ನು ಡಿಕೆ ಸಾಹೇಬ ಕಳೆದ ವಿಧಾನಸಭಾ ಚುನಾವಣೆಯಲ್ಲಿ(Assembly election) ಪ್ರೂವ್ ಮಾಡಿ ಬಿಟ್ಟಿದ್ದಾರೆ. ಆದ್ರೀಗ ಇಂಥಾ ಬೇಟೆಗಾರನನ್ನೇ ಬೇಟೆಯಾಡೋ ರಣಬೇಟೆಗಾರನ ರೂಪದಲ್ಲಿ ನುಗ್ಗಿ ಬಂದಿದೆ ಮೈತ್ರಿ ತೂಫಾನ್. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡ್ಕೊಂಡು  ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲಿವೆಯಂತೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನನ್ನು ಮಕಾಡೆ ಮಲಗಿಸಿ ಬಿಟ್ಟಿರೋ ಕನಕಪುರ ಬಂಡೆ ಡಿಕೆ ಶಿವಕುಮಾರ್ ಅವರ ಮುಂದಿನ ಟಾರ್ಗೆಟ್ ಲೋಕಸಭಾ ಚುನಾವಣೆ. ಈಗಾಗ್ಲೇ ಮಿಷನ್ 20 ಗುರಿಯೊಂದಿಗೆ ಲೋಕಯುದ್ಧಕ್ಕೆ ಬಂಡೆ ತಾಲೀಮು ಶುರುವಾಗಿದೆ. ಅದ್ರಲ್ಲೂ ಮುಖ್ಯವಾಗಿ ಡಿಕೆಶಿಯವ್ರು ಟಾರ್ಗೆಟ್ ಮಾಡಿರೋದು ಎರಡು ಅಖಾಡಗಳನ್ನ. ಒಂದು ಮಂಡ್ಯ, ಮತ್ತೊಂದು ಬೆಂಗಳೂರು ಗ್ರಾಮಾಂತರ. ಕಳೆದ ಚುನಾವಣೆಯಂದೀಚೆಗೆ ಕಾಂಗ್ರೆಸ್ ಭದ್ರಕೋಟೆಯಾಗಿ ಬದಲಾಗಿರೋ ಈ ಎರಡೂ ಕ್ಷೇತ್ರಗಳನ್ನು ಕೈವಶ ಮಾಡಿಕೊಳ್ಳಲು ಡಿಕೆಶಿ ಪ್ಲ್ಯಾನ್‌ ಮಾಡ್ತಿದ್ದಾರೆ. ಈ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆಶಿ ಸಹೋದರ ಡಿಕೆ ಸುರೇಶ್ ಅವ್ರೇ ಹಾಲಿ ಸಂಸದ. ಇದ್ರ ಜೊತೆಗೆ ಮಂಡ್ಯವನ್ನೂ ಗೆದ್ದು ಒಕ್ಕಲಿಗರ ಕೋಟೆಯಲ್ಲಿ ಪ್ರಭಾವಿ ಹೆಚ್ಚಿಸಿಕೊಳ್ಳೋದು ಡಿಕೆ ಶಿವಕುಮಾರ್ ಅವರ ಮೆಗಾ ಪ್ಲಾನ್. 

ಇದನ್ನೂ ವೀಕ್ಷಿಸಿ:  ಒಂದು ದಿನದ ಸಮಸ್ಯೆ ಅಲ್ಲ, ಇವರದ್ದು ನಿತ್ಯ ನರಕ: 6 ವರ್ಷವಾದ್ರೂ ಉದ್ಘಾಟನೆಯಾಗದ ಶೌಚಾಲಯ