SSLC ವಿದ್ಯಾರ್ಥಿನಿ ತಲೆಯನ್ನು ಹೊತ್ತೊಯ್ದಿದ್ದ ಹಂತಕನ ಟಾರ್ಗೆಟ್ ಆಕೆ ಮಾತ್ರ ಆಗಿರಲಿಲ್ಲ!

ತಲೆಯನ್ನ ಒಂದು ಪೊದೆಯಲ್ಲಿಟ್ಟು ಮೀನಾಳ ಅಕ್ಕಳ ಮನೆಗೆ ಬಂದ ಹಂತಕ. ಅವಳನ್ನೂ ಮುಗಿಸೋ ಯೋಚನೆಯಲ್ಲಿದ್ದ. ಆದರೆ ಅದು ಜಸ್ಟ್ ಮಿಸ್ ಆಗಿತ್ತು. ಆ ಭೀಕರ ಘಟನೆಯೇ ಇವತ್ತಿನ ಎಫ್‌ಐಆರ್

Share this Video
  • FB
  • Linkdin
  • Whatsapp

ಅದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳೀಸಿದ್ದ ಮರ್ಡರ್​​ ಕೇಸ್​​... ಮದುವೆಯಾಗಬೇಕಿದ್ದವಳ ರುಂಡ ಕತ್ತರಿಸಿ ಕಾಡಿನೊಳಗೆ ಎಸ್ಕೇಪ್​ ಆಗಿಬಿಟ್ಟಿದ್ದ... ಬೆಳಗ್ಗೆ ಎಸ್​​​ಎಸ್​ಎಲ್​ಸಿ ರಿಸಲ್ಟ್​ ಬಂದಾಗ ಖುಷಿಯಾಗಿದ್ದವಳು ಮಧ್ಯಾಹ್ನ ಎಂಗೇಜ್​ಮೆಂಟ್​​​ಗೆ ರೆಡಿಯಾಗಿದ್ದಳು ಆದ್ರೆ ಸಂಜೆಯಾಗುವಷ್ಟರಲ್ಲೇ ಮದುವೆಯಾಗಬೇಕಿದ್ದವನಿಂದಲೇ ಬರ್ಬರವಾಗಿ ಕೊಲೆಯಾಗಿ ಹೋಗಿದ್ಲು... ಇನ್ನೂ ಹಂತಕ ಅವಳ ಕತ್ತು ಕತ್ತರಿಸಿ ತಲೆಯನ್ನ ತನ್ನ ಜೊತೆಯೇ ಹೊತ್ತೊಯ್ದಿದ್ದ.. ಎರಡು ದಿನವಾದ್ರೂ ತಲೆಯಾಗಲಿ, ಹಂತಕ ಆಗಲಿ ಸಿಕ್ಕೇ ಇರಲಿಲ್ಲ. ಮೀನಾಳ ತಲೆ ಹೊತ್ತೊಯ್ದ ಪ್ರಕಾಶ ಸೀದಾ ಹೋಗಿದ್ದು ತನ್ನ ಮನೆಗೆ.. ಬಟ್ಟೆ ಬದಲಿಸಿ ಮನೆಯಲ್ಲಿದ್ದ ಫುಲ್​ ಲೋಡೆಡ್​​ ಕೋವಿ ತೆಗೆದುಕೊಂಡು, ತಲೆಯ ಜೊತೆಗೇ ಕಾಡಿನೊಳಗೆ ನುಗ್ಗಿದ.. ತಲೆಯನ್ನ ಒಂದು ಪೊದೆಯಲ್ಲಿಟ್ಟು ಮೀನಾಳ ಅಕ್ಕಳ ಮನೆಗೆ ಬಂದ.. ಅವಳನ್ನೂ ಮುಗಿಸೋ ಯೋಚನೆ ಪ್ರಕಾಶನಿಗಿತ್ತು.. ಆದರೆ ಅದು ಜಸ್ಟ್ ಮಿಸ್ ಆಗಿತ್ತು. ಕೊಡಗಿನ ಬ್ರೂಟಲ್​ ಮರ್ಡರ್ ಹಿಂದಿನ ರೋಚಕ ಕಥೆಯೇ ಇವತ್ತಿನ ಎಫ್​​.ಐ.ಆರ್

Related Video