Asianet Suvarna News Asianet Suvarna News

ಆ ಸಂಜೆ ಆ ಮನೆಯಲ್ಲಿ ನಿಜಕ್ಕೂ ನಡೆದಿದ್ದೇನು..? ಕಾರ್ ಡ್ರೈವರ್ ಪ್ರತಿಮಾರನ್ನು ಕೊಂದಿದ್ದೇಕೆ ಗೊತ್ತಾ..?

ಸರ್ಕಾರಿ ಅಧಿಕಾರಿ ಪ್ರತಿಮಾ ಕೊಲೆ ರಹಸ್ಯ ಬಯಲು..!
ಪ್ರತಿಮಾರನ್ನ ಕೊಂದು 5 ಲಕ್ಷ ಕೊಂಡೊಯ್ದಿದ್ದ ಆರೋಪಿ
ಎಸ್ಕೇಪ್ ಆಗೋ ಮೊದಲು ಗೆಳೆಯನಿಗೆ ಕಾಲ್ ಮಾಡಿದ್ದ..!

ಸರಿಯಾಗಿ 15 ದಿನಗಳ ಹಿಂದೆ ಸರ್ಕಾರಿ ಅಧಿಕಾರಿ ಪ್ರತಿಮಾ(Prathima) ತನ್ನದೇ ಮನೆಯಲ್ಲಿ ಕೊಲೆಯಾಗಿ(Murder) ಹೋಗಿದ್ರು. ಆ ದಿನ ಇದೇ ಕೊಲೆ ಇಡೀ ಕರ್ನಾಟಕವನ್ನ(Karnataka) ಬೆಚ್ಚಿ ಬೀಳಿಸಿತ್ತು. ಆವತ್ತು ಈ ಕೊಲೆ ಹಲವು ಅಂತೆ ಕಂತೆಗಳನ್ನ ಹುಟ್ಟು ಹಾಕಿತ್ತು. ಆದ್ರೆ ನಂತರ ಗೊತ್ತಾಗಿದ್ದು ಪ್ರತಿಮಾರನ್ನ ತಮ್ಮದೇ ಕಾರ್ ಡ್ರೈವರ್ ಕೊಲೆ ಮಾಡಿದ್ದ ಅಂತ. ಅಷ್ಟೇ ಅಲ್ಲ ಆತನನ್ನ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ರು ಕೂಡ. ಆಗ ಆತ ಆಕೆಯನ್ನ ನಾನೇ ಕೊಲೆ ಮಾಡಿದ್ದೆ ಆಕೆ ನನ್ನನ್ನ ಕೆಲಸದಿಂದ ತೆಗೆದು ಹಾಕಿದ್ರು ಅಂತ ಹೇಳಿದ್ದ. ಆ ಮಾತನ್ನ ಆಗ ಪೊಲೀಸರೂ ಸೇರಿದಂತೆ ಎಲ್ಲರೂ ನಂಬಿಕೊಂಡಿದ್ರು. ಆದರೆ ಈಗ ಪ್ರತಿಮಾ ಕೊಲೆಯ ಹಿಂದಿನ ಅಸಲಿ ಸತ್ಯ ಬಯಲಾಗಿದೆ. ಪ್ರತಿಮಾ ಕೊಲೆಯಾಗಿ ಕೆಲವೇ ಗಂಟೆಗಳಲ್ಲಿ ಕಿರಣನನ್ನ ಬಂಧಿಸಿ ಪೊಲೀಸರು ಎತ್ತಾಕೊಂಡು ಬರ್ತಾರೆ. 10 ದಿನ ಕಸ್ಟಡಿಗೂ ಪಡೆಯುತ್ತಾರೆ.ನಂತರ ಅವನ ವಿಚಾರಣೆ ಶುರು ಮಾಡ್ತಾರೆ. ಆದ್ರೆ ಆ ವೇಳೆಯಲ್ಲಿ ಆತ ಸೇಡಿನ ಕಥೆಯನ್ನ ಹೇಳಿದ್ದ. ಪೊಲೀಸರೂ ಕೂಡ ಅದನ್ನ ನಂಬಿಕೊಂಡಿದ್ರು.ಆದ್ರೆ ಮೊನ್ನೆ ಒಬ್ಬ ಆಟೋ ಡ್ರೈವರ್ ಪೊಲೀಸ್ ಠಾಣೆಗೆ ಬಂದು ಒಂದು ಮಾಹಿತಿ ಕೊಟ್ಟಿದ್ದ. ಆ ಮಾಹಿತಿ ಇದೇ ಪ್ರತಿಮಾ ಕೊಲೆಯ ಬಗ್ಗೆ ಆಗಿತ್ತು.ಒಂದು ಕೊಲೆ ಮಾಡಿ ಮಲೈ ಮಹದೇಶ್ವರ ಬೆಟ್ಟದಲ್ಲಿ ತಪ್ಪು ಕಾಣಿಕೆ ಆಗ್ತಿದ್ದ ಕಿರಣನನ್ನ ಪೊಲೀಸರು ಬಂಧಿಸಿ ಕರೆತಂದ್ರು. ನಂತರ ವಿಚಾರಣೆಯನ್ನೂ ಶುರು ಮಾಡಿದ್ರು. ಆದ್ರೆ ಆಗ ಆತ ಪ್ರತಿಮಾ ನನ್ನನ್ನ ಕೆಲಸದಿಂದ ತೆಗೆದು ಹಾಕಿದ್ರು ಇದೇ ಕಾರಣಕ್ಕೆ ನಾನು ಅವರನ್ನ ಕೊಲೆ ಮಾಡಿದೆ ಅಂತ ಹೇಳಿದ್ದ.. ಪೊಲೀಸರು ಕೂಡ ಅದು ನಿಜ ಇರಬಹುದು ಅಂತ ಅಂದುಕೊಂಡಿದ್ರು. ಆದ್ರೆ ಇತ್ತಿಚೆಗೆ ಒಬ್ಬ ಆಟೋ ಡ್ರೈವರ್ ಒಂದು ದುಡ್ಡಿನ ಚೀಲ ತಂದು ಪೊಲೀಸರ ಮುಂದಿಟ್ಟು ಒಂದು ಕಥೆ ಹೇಳಿದ್ದ. ಅದೇನಂದ್ರೆ ಆ ದುಡ್ಡಿನ ಬ್ಯಾಗ್ ಕಿರಣನೇ ಕೊಟ್ಟಿದ್ದ. ಪ್ರತಿಮಾ ಕೊಲೆಯ ಮಾರನೇ ದಿನವೇ ನನಗೆ ಕೊಟ್ಟಿದ್ದು ಆದ್ರೆ ಈಗ ಆ ದುಡ್ಡಿನ ಮೇಲೆ ಅನುಮಾನ ಬರ್ತಿದೆ ಅಂದ.. ಈ ಮಾತುಗಳನ್ನ ಕೇಳಿದ ಪೊಲೀಸರು ಮತ್ತೆ ಕಿರಣನ ವಿಚಾರಣೆ ಶುರು ಮಾಡಿದ್ರು.. ಆಗ 5 ಲಕ್ಷದ ಹೊಸ ಕಥೆಯನ್ನ ಹೇಳೋದಕ್ಕೆ ಶುರು ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್‌ ಸರ್ಕಾರದ ಆರು ತಿಂಗಳ ಸಾಧನೆಗಳೇನು ? ಸಿದ್ದು ಸರ್ಕಾರ ಜಾರಿ ಮಾಡಿದ ಯೋಜನೆಗಳೇನು..?

Video Top Stories