Asianet Suvarna News Asianet Suvarna News

ಕಾಂಗ್ರೆಸ್‌ ಸರ್ಕಾರದ ಆರು ತಿಂಗಳ ಸಾಧನೆಗಳೇನು ? ಸಿದ್ದು ಸರ್ಕಾರ ಜಾರಿ ಮಾಡಿದ ಯೋಜನೆಗಳೇನು..?

ಸಿದ್ದು ಸರ್ಕಾರಕ್ಕೆ 6 ತಿಂಗಳು..!
ಸಿಎಂ-ಡಿಸಿಎಂ ಶೀತಲ ಸಮರ..!
ಬಿಸಿತುಪ್ಪವಾದ್ರಾ ಯತೀಂದ್ರ..?
ಸವಾಲುಗಳ ಜೊತೆ ರಾಜ್ಯಭಾರ..!

ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಕರ್ನಾಟಕದಲ್ಲಿ(Karnataka) ಆಡಳಿತ ಶುರು ಮಾಡಿದ ಕಾಂಗ್ರೆಸ್ 6 ತಿಂಗಳ ಪಯಣ ಕಂಡಿದೆ. ಈ ಆರು ತಿಂಗಳಲ್ಲಿ ಸಿದ್ದು ಸರ್ಕಾರ ಅನೇಕ ಏಳು ಬೀಳುಗಳನ್ನ ಕಂಡಿದೆ. ಗ್ಯಾರಂಟಿಗಳಿಂದ(Guarantees) ಜನ ಮನ ಗೆದ್ದಿರೋ ಸರ್ಕಾರ ಅನೇಕ ಸವಾಲುಗಳ ಜೊತೆಗೆ ಸಾಗ್ತಾ ಇದೆ. ಬನ್ನಿ ಹಾಗಾದ್ರೆ ಆರು ತಿಂಗಳಲ್ಲಿ ಏನೆಲ್ಲಾ ಆಯ್ತು ಅನ್ನೋದನ್ನ ನೋಡೋಣ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್(Congress) ಸರ್ಕಾರಕ್ಕೆ ಆರು ತಿಂಗಳು ಕಳೆದಿದೆ. ಅರ್ಧ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನ ಜಾರಿ ಮಾಡಿ ಜನಮನ ಗೆದ್ದಿದೆ. ಆದ್ರೆ ಅನೇಕ ಸವಾಲುಗಳು ಪಕ್ಷಕ್ಕೆ ಹಾಗೂ ಸರ್ಕಾರವನ್ನ ನಡೆಸೋಕೆ ಆಗಾಗ ಎದುರಾಗ್ತಾನೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಕುರುಕ್ಷೇತ್ರ ಕದನದಲ್ಲಿ ಕಮಾಲ್ ಮಾಡಿದ ಕೈ ಪಡೆ  136 ಸೀಟು ಗೆದ್ದು ಸ್ಪಷ್ಟ ಬಹುಮತ ಸರ್ಕಾರ ರಚಿಸಿತ್ತು. ಆದ್ರೆ ಸುಲಭವಾಗಿ ಸಿದ್ದರಾಮಯ್ಯ ಸಿಎಂ ಆಗಲಿಲ್ಲಾ. ಆ ಪಟ್ಟಕ್ಕಾಗಿ ಡಿಕೆಶಿ ತುಂಬಾನೇ ಪಟ್ಟು ಹಿಡಿದಿದ್ರು. ಸಿದ್ದರಾಮಯ್ಯ(Siddaramaiah) ವರುಣದಲ್ಲಿ 45 ಸಾವಿರ ಮತಗಳ ಪಡೆದು ಗೆದ್ದು ಬೀಗಿದ್ರೆ.. ಕನಪುರದಲ್ಲಿ ಡಿ.ಕೆ ಶಿವಕುಮಾರ್(DK Shivakumar) 1 ಲಕ್ಷಕ್ಕೂ ಅಧಿಕ ವೋಟ್‌ಗಳಿಂದ ಜಯಭೇರಿಯಾಗಿದ್ದಾರೆ. ಇಡೀ ಚುನಾವಣಾ ಕಣದಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದವರೇ ಕನಕಪುರಾಧೀಶ್ವರ  ಡಿಕೆ ಶಿವಕುಮಾರ್. ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಎಂ ಕನಸಲ್ಲಿ ಇದ್ದರು. ಅದೊಂದು ಚುನಾವಣೆಯಿಂದ ದೇಶಾದ್ಯಂತ ಸದ್ದು ಮಾಡಿದ್ರು. ಹೀಗಾಗಿ ಡಿಕೆ ಶಿವಕುಮಾರ್ ಅವರೇ ಸಿಎಂ ಆಗಬಹುದು ಅನ್ನೋ ಲೆಕ್ಕಾಚಾರಗಳು ಶುರುವಾಗಿತ್ತು. ಬಟ್ ಸಿದ್ರಾಮಯ್ಯನವರು ಕೂಡ ಹೈಕಮಾಂಡ್ ಮುಂದೆ ತಮ್ಮ ಪ್ರಬಲ ವಾದವನ್ನ ಇಟ್ಟಿದ್ರು. ಮೂರ್ನಾಲ್ಕು ದಿನಗಳ ಮ್ಯಾರಥಾನ್ ಮೀಟಿಂಗ್ ನಂತರ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಆಯ್ಕೆ ಆದ್ರು. 

ಇದನ್ನೂ ವೀಕ್ಷಿಸಿ:  ಮೋದಿ ಗ್ಯಾರೆಂಟಿ ನಿಜವಾಗೋಕೆ ಇನ್ನೆಷ್ಟು ದಿನ ಬಾಕಿ..? ಭಾರತದ ಈ ಮಹಾಸಾಧನೆ ಹಿಂದಿರೋ ಅಸಲಿ ಕಥೆ ಏನು?

Video Top Stories